ಅಪಿಯಾ, ಸಮೊವಾ: ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅಜಯ್ ಸಿಂಗ್ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ಶುಕ್ರವಾರ ಅವರು 81 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದರು.

22 ವರ್ಷದ ಅಜಯ್, ತನ್ನ ಶರೀರ ತೂಕಕ್ಕಿಂತ(190 ಕೆಜಿ) ಎರಡು ಪಟ್ಟು ಭಾರ ಎತ್ತುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಬರೆದರು.

ಒಲಿಂಪಿಕ್ಸ್‌ಗೆ ಮಹತ್ವದ ಪಾಯಿಂಟ್‌ಗಳನ್ನು ಗಳಿಸಿದರು.

ಏಷ್ಯನ್ ಯೂಥ್ ಹಾಗೂ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿ ಯನ್‌ಷಿಪ್‌ನ ಕಂಚು ವಿಜೇತ ಭಾರತದ ಆಟಗಾರ ಕ್ಲೀನ್ ಮತ್ತು ಜೆರ್ಕ್ ಸೇರಿ ಒಟ್ಟು 338 ಕೆಜಿ ಭಾರ ಎತ್ತಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ. ಚೀನಾದ ನಿಂಗ್‌ಬೊದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅವರು 320 ಕೆಜಿ ಭಾರ ಎತ್ತಿದ್ದರು.

81 ಕೆಜಿ ವಿಭಾಗದಲ್ಲಿ ಭಾರತದ ವರೇ ಆದ ಪಪುಲ್ ಚಂಗ್ಮಯಿ ಬೆಳ್ಳಿ ಪದಕ ಗೆದ್ದರು. ಒಟ್ಟು 313 ಕೆಜಿ (135+178) ಭಾರ ಎತ್ತಿದರು. ಫೆಬ್ರವರಿಯಲ್ಲಿ ನಡೆದ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅವರಿಗೆ ಚಿನ್ನದ ಪದಕ ಒಲಿದಿತ್ತು. ಪುರುಷರ 87 ಕೆಜಿ ವಿಭಾಗದಲ್ಲಿ ಪಿ.ಅನುರಾಧ 221 ಕೆಜಿ ಭಾರ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ ಆರ್‌ವಿ ರಾಹುಲ್ ಅವರು 89 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.