ನವದೆಹಲಿ: ಹಿರಿಯ ಆಟಗಾರರಾದ ಶರತ್ ಕಮಲ್ ಹಾಗೂ ಮಣಿಕಾ ಬಾತ್ರಾ ಅವರು ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನ ಭಾರತದ ಪುರಷ ಹಾಗೂ ಮಹಿಳಾ ಟೇಬಲ್ ಟೆನ್ನಿಸ್ ತಂಡವನ್ನು ಕ್ರಮವಾಗಿ ಮುನ್ನಡೆಸಲಿದ್ದಾರೆ.

ಭಾರತೀಯ ಟೇಬಲ್ ಟೆನ್ನಿಸ್ ಒಕ್ಕೂಟದ ಹಿರಿಯರ ಆಯ್ಕೆ ಸಮಿತಿಯು ಒಲಿಂಪಿಕ್ಸ್ ನಿಯಮದಂತೆ ಆರು ಜನರ ತಂಡವನ್ನು ಆಯ್ಕೆ ಮಾಡಿತು. ಶರತ್, ಹರ್ಮೀತ್ ದೇಸಾಯಿ ಹಾಗೂ ಮಾನವ್ ಠಕ್ಕರ್ ಅವರು ಮೂರು ಪುರುಷರ ತಂಡದಲ್ಲಿದ್ದಾರೆ. ಮಣಿಕಾ, ಶ್ರೀಜಾ ಅಕುಲಾ ಹಾಗೂ ಅರ್ಚನಾ ಕಾಮತ್ ಅವರು ಮಹಿಳಾ ತಂಡದ ಸದಸ್ಯರಾಗಿರಲಿದ್ದಾರೆ. ಬದಲಿ ಆಟಗಾರರಾಗಿ ಪುರುಷರ ವಿಭಾಗದಲ್ಲಿ ಜಿ.ಸಥಿಯನ್ ಹಾಗೂ ಆಯ್ಹಿಕಾ ಮುಖರ್ಜಿ ತಂಡದಲ್ಲಿ ಇರಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಶರತ್ ಹಾಗೂ ಹರ್ಮೀತ್, ಮಹಿಳೆಯರ ವಿಭಾಗದಲ್ಲಿ ಮಣಿಕಾ ಮತ್ತು ಶ್ರೀಜಾ ಆಡಲಿದ್ದಾರೆ. ಈ ಆಯ್ಕೆಯು ವಿಶ್ವ ರ‍್ಯಾಂಕಿಂಗ್ ಅನುಗುಣವಾಗಿ ಮಾಡಲಾಗಿದೆ ಎಂದು ಒಕ್ಕೂಟ ಹೇಳಿದೆ. 41 ವರ್ಷದ ಶರತ್ ಅವರಿಗೆ ಇದು 5ನೇ ಹಾಗೂ ಕೊನೆಬಾರಿ ಒಲಿಂಪಿಕ್ಸ್.

ಮತ್ತೊಂದೆಡೆ ಮಹಿಳಾ ತಂಡದ ಆಯ್ಕೆಯಲ್ಲಿ ಒಂದಷ್ಟು ಗೊಂದಲ ಉಂಟಾಗಿದೆ. ಮಣಿಕಾ ಹಾಗೂ ಶ್ರೀಜಾ ಅಕುಲಾ ಅವರು ತಮ್ಮ ವಿಶ್ವ ರ‍್ಯಾಂಕ್ ಆಧಾರದಲ್ಲಿ ತಂಡದಲ್ಲಿ ಸ್ಥಾನ ಪಡೆದರು. ಆದರೆ ಬೆಂಗಳೂರಿನ ಅರ್ಚನಾ ಕಾಮತ್ (103) ಅವರು ಮೂರನೇ ಆಟಗಾರ್ತಿಯಾಗಿ ತಂಡದಲ್ಲಿ ಸ್ಥಾನ ಪಡೆದರು. 133 ಅಂಕಗಳಿದ್ದರೂ, ಇನ್ನಿತರ ಸಂಗತಿಗಳಿಂದ ಅರ್ಚನಾ ಅವರು ಅಯ್ಹಿಕಾ ಮುಖರ್ಜಿ ಅವರನ್ನು ಹಿಂದಿಕ್ಕಿದರು.

ಮ್ಯಾಸಿಮೊ ಕಾಸ್ಟಾಂಟಿನಿ ಅವರು ಆಯ್ಕೆ ಸಮಿತಿಯಲ್ಲಿದ್ದರು. ಒಲಿಂಪಿಕ್ಸ್‌ಗಾಗಿ ನಡೆಯುತ್ತಿರುವ ಈ ಆಯ್ಕೆಯಲ್ಲಿ ವಿದೇಶಿ ಆಟಗಾರರ ಸಲಹೆ ಬಹಳಾ ಮುಖ್ಯವಾದದ್ದು ಎಂದೆನ್ನಲಾಗಿದೆ. ಕಾಸ್ಟಾಂಟಿನಿ ಅವರು ಭಾರತ ತಂಡದ ಉಸ್ತುವಾರಿ ವಹಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಮುಂದಿನ ವಾರ ಅವರು ಭಾರತಕ್ಕೆ ಬರುವ ನಿರೀಕ್ಷೆ ಇದೆ.

ಬದಲಿ ಆಟಗಾರರಾದ ಸಥಿಯನ್ ಹಾಗೂ ಆಯ್ಹಿಕಾ ಅವರು ಪ್ಯಾರಿಸ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ ಕ್ರೀಡಾ ಗ್ರಾಮದಲ್ಲಿ ಇವರು ತಂಗುವುದಿಲ್ಲ. ಒಂದೊಮ್ಮೆ ಮುಖ್ಯ ಆಟಗಾರರು ಗಾಯಗೊಂಡಲ್ಲಿ, ಇವರು ತಂಡವನ್ನು ಪ್ರತಿನಿಧಿಸಲಿದ್ದಾರೆ.

ಭಾರತ ತಂಡ ಹೀಗಿದೆ...

ಪುರುಷ: ಎ.ಶರತ್ ಕಮಲ್, ಹರ್ಮೀತ್ ದೇಸಾಯಿ ಹಾಗೂ ಮಾನವ್ ಠಕ್ಕರ್; ಬದಲಿ ಆಟಗಾರ– ಜಿ.ಸಥಿಯನ್

ಮಹಿಳಾ: ಮಣಿಕಾ ಬಾತ್ರಾ, ಶ್ರೀಜಾ ಅಕುಲ ಹಾಗೂ ಅರ್ಚನಾ ಕಾಮತ್. ಬದಲಿ ಆಟಗಾರ್ತಿ– ಆಯ್ಹಿಕಾ ಮುಖರ್ಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.