ಚೀನಾ, ಜಪಾನ್, ಮಲೇಷ್ಯಾದ ಕ್ರೀಡಾಪಟುಗಳೇ ಪಾರುಪತ್ಯ ಹೊಂದಿರುವ ಬ್ಯಾಡ್ಮಿಂಟನ್ನಲ್ಲಿ ಭಾರತದ ತಾರೆಯರೂ ಮಿನುಗುತ್ತಿದ್ದಾರೆ. ಆಲ್ ಇಂಗ್ಲೆಂಡ್ ಓಪನ್, ವಿಶ್ವ ಚಾಂಪಿಯನ್ಷಿಪ್ ಹೀಗೆ ಪ್ರತಿಷ್ಠಿತ ಟೂರ್ನಿಗಳಲ್ಲೆಲ್ಲಾ ಪದಕ, ಪ್ರಶಸ್ತಿಗಳನ್ನು ಗೆದ್ದು ಛಾಪು ಮೂಡಿಸುತ್ತಿದ್ದಾರೆ. ಒಲಿಂಪಿಕ್ಸ್ ಮಹಾ ಕೂಟದಲ್ಲೂ ಪದಕಕ್ಕೆ ಮುತ್ತಿಕ್ಕಿ ಹೊಸ ಭಾಷ್ಯ ಬರೆದಿದ್ದಾರೆ.

ಇಷ್ಟಾದರೂ ಒಲಿಂಪಿಕ್ಸ್ ಚಿನ್ನ ಕೈಗೆಟುಕದಾಗಿದೆ. ಬೆಳಕಿನ ನಗರಿ ಪ್ಯಾರಿಸ್ನಲ್ಲಾದರೂ ಈ ಕೊರಗು ದೂರವಾಗುವುದೇ ಎಂಬ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿ ಗರಿಗೆದರಿದೆ.

ಒಲಿಂಪಿಕ್ಸ್ ಬ್ಯಾಡ್ಮಿಂಟನ್ನಲ್ಲಿ ಭಾರತದವರೂ ಪದಕ ಗೆಲ್ಲಬಲ್ಲರು ಎಂಬುದನ್ನು ಜಗತ್ತಿಗೇ ಸಾರಿ ಹೇಳಿದವರು ಸೈನಾ ನೆಹ್ವಾಲ್. 2012ರ ಲಂಡನ್ ಕೂಟದಲ್ಲಿ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿ ಚರಿತ್ರೆ ಸೃಷ್ಟಿಸಿದ್ದರು. 2016ರ ರಿಯೊ ಕೂಟದಲ್ಲಿ ಪಿ.ವಿ.ಸಿಂಧು ಬೆಳ್ಳಿಯ ಬೆಡಗು ಮೂಡಿಸಿ ಭಾರತದ ಬ್ಯಾಡ್ಮಿಂಟನ್ನಲ್ಲಿ ಹೊಸ ಸಂಚಲನಕ್ಕೆ ಕಾರಣರಾಗಿದ್ದರು. 2021ರ ಟೋಕಿಯೊ ಕೂಟದಲ್ಲಿ ಕಂಚು ಗೆದ್ದು ತಾನು ವಿಶ್ವದ ಸವ್ಯಸಾಚಿ ಆಟಗಾರ್ತಿ ಎಂಬುದನ್ನು ನಿರೂಪಿಸಿದ್ದರು.

ಈ ಬಾರಿ ಸಿಂಧು, ಚಿನ್ನದ ಕನಸಿನ ಬೆನ್ನೇರಿ ಪ್ಯಾರಿಸ್ಗೆ ಪಯಣಿಸಿದ್ದಾರೆ. ‘ಹ್ಯಾಟ್ರಿಕ್’ ಸಾಧನೆಯ ಸವಾಲೂ ಎದುರಿಗಿದೆ. ವಿಶ್ವ ರ್ಯಾಂಕಿಂಗ್ನಲ್ಲಿ 13ನೇ ಸ್ಥಾನದಲ್ಲಿರುವ ಅವರಿಗೆ ಸಾಟಿಯಾಗಬಲ್ಲವರಾರೂ ಗುಂಪು ಹಂತದಲ್ಲಿಲ್ಲ. ಆದರೆ ಕ್ವಾರ್ಟರ್ ಫೈನಲ್, ಸೆಮಿ ಹಾಗೂ ಫೈನಲ್ನಲ್ಲಿ ಅಗ್ನಿಪರೀಕ್ಷೆ ಎದುರಾಗುವ ನಿರೀಕ್ಷೆ ಇದೆ. ಇದನ್ನು ಮೆಟ್ಟಿ ನಿಂತರೆ ಮಿರುಗುವ ಚಿನ್ನಕ್ಕೆ ಮುತ್ತಿಕ್ಕಬಹುದು.

ಪುರುಷರ ಸಿಂಗಲ್ಸ್ನಲ್ಲಿ ಎಚ್.ಎಸ್.ಪ್ರಣಯ್ ಹಾಗೂ ಲಕ್ಷ್ಯ ಸೇನ್, ಭಾರತದ ಸವಾಲು ಮುನ್ನಡೆಸುತ್ತಿದ್ದಾರೆ. ವಿಶ್ವ ರ್ಯಾಂಕಿಂಗ್ನಲ್ಲಿ ಕ್ರಮವಾಗಿ 12 ಮತ್ತು 18ನೇ ಸ್ಥಾನಗಳಲ್ಲಿರುವ ಇವರು ವಿಶ್ವಶ್ರೇಷ್ಠರ ಸವಾಲು ಮೀರಬಲ್ಲರು. ಒಲಿಂಪಿಕ್ಸ್ನಲ್ಲಿ ಎದುರಾಗಬಹುದಾದ ಒತ್ತಡವನ್ನು ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂಬುದರ ಮೇಲೆ ಇವರ ಪದಕದ ಭವಿಷ್ಯ ನಿರ್ಧರಿತವಾಗಲಿದೆ.

ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಬೀಗಿದ್ದ ಈ ಜೋಡಿ, ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೂ ಏರಿ ಹೊಸ ಅಧ್ಯಾಯ ಬರೆದಿತ್ತು.

ಮಹಿಳೆಯರ ಡಬಲ್ಸ್ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ತನೀಷಾ ಕ್ರಾಸ್ಟೊ ಮೇಲೆ ನಿರೀಕ್ಷೆಯ ಭಾರ ಇದೆ. ರ್ಯಾಂಕಿಂಗ್ನಲ್ಲಿ ಈ ಜೋಡಿ 19ನೇ ಸ್ಥಾನದಲ್ಲಿದೆ. ದಿಗ್ಗಜ ಪ್ರಕಾಶ್ ಪಡುಕೋಣೆ ಅವರು ಮೆಂಟರ್ ಆಗಿ ತಂಡದ ಜೊತೆ ತೆರಳಿದ್ದಾರೆ. ಭಾರತಕ್ಕೆ ಮೊದಲ ಆಲ್ ಇಂಗ್ಲೆಂಡ್ ಪ್ರಶಸ್ತಿ ಜಯಿಸಿಕೊಟ್ಟ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಇವರು. ಅಂದಿನಿಂದ ಇಂದಿನವರೆಗೆ ದೇಶದ ಬ್ಯಾಡ್ಮಿಂಟನ್ ಬೆಳವಣಿಗೆಗೆ ಪ್ರೇರಣೆಯಾಗಿರುವ ಅವರ ಮಾರ್ಗದರ್ಶನಕ್ಕೆ ಚಿನ್ನದ ಹೊಳಪು ಮೂಡುವ ಭರವಸೆ ಮನೆಮಾಡಿದೆ.

ಪ್ರಕಾಶ್ ಪಡುಕೋಣೆ

ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ. ಕರ್ನಾಟಕದ ಪ್ರಕಾಶ್ ಅವರು ಈ ಬಾರಿ ಒಲಿಂಪಿಕ್ಸ್ನಲ್ಲಿ ಭಾರತ ಬ್ಯಾಡ್ಮಿಂಟನ್ ತಂಡಕ್ಕೆ ಮೆಂಟರ್ ಆಗಿದ್ದಾರೆ.

ಸೈನಾ ನೆಹ್ವಾಲ್

2012ರಲ್ಲಿ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಜಯಿಸಿದ ಬ್ಯಾಡ್ಮಿಂಟನ್ ಆಟಗಾರ್ತಿ. ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿಯಾದರು.

ವಿಜೇಂದರ್ ಸಿಂಗ್

2008ರಲ್ಲಿ ಬೀಜಿಂಗ್ನಲ್ಲಿ ನಡೆದ ಒಲಿಂಪಿಕ್ ಕೂಟದ ಪುರುಷರ ಬಾಕ್ಸಿಂಗ್ನಲ್ಲಿ ಕಂಚಿನ ಪದಕ ಗಳಿಸಿದರು. 2009ರಲ್ಲಿ ವಿಶ್ವ ಚಾಂಪಿಯನ್ಷಿಪ್ ಮಿಡ್ಲ್ವೇಟ್ ವಿಭಾಗದಲ್ಲಿಯೂ ಕಂಚು ಗೆದ್ದರು.

ಮೇರಿ ಕೋಮ್

ಮಣಿಪುರದ ಬಾಕ್ಸರ್ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್ನಲ್ಲಿ ಕಂಚಿನ ಪದಕ ಜಯಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಬಾಕ್ಸರ್ ಎನಿಸಿದರು. ವಿಶ್ವ ಬಾಕ್ಸಿಂಗ್ನಲ್ಲಿ ಆರು ಬಾರಿ ಚಾಂಪಿಯನ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.