ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ: ಎರಡನೇ ಸುತ್ತಿಗೆ ಪ್ರಿಯಾನ್ಶು ರಾಜಾವತ್

Published 4 ಜುಲೈ 2024, 14:27 IST
Last Updated 4 ಜುಲೈ 2024, 14:27 IST
ಅಕ್ಷರ ಗಾತ್ರ

ಕ್ಯಾಲ್ಗರಿ (ಕೆನಡಾ): ಎಂಟನೇ ಶ್ರೇಯಾಂಕದ ರಾಸ್ಮಸ್‌ ಗೆಮ್ಕೆ ಅವರಿಗೆ ಆಘಾತ ನೀಡಿದ ಭಾರತದ ಪ್ರಿಯಾನ್ಶು ರಾಜಾವತ್‌ ಅವರು ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಬ ಪುರುಷರ ಸಿಂಗಲ್ಸ್‌ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 39ನೇ ಸ್ಥಾನದಲ್ಲಿರುವ ರಾಜಾವತ್‌ 17-21 21-16 21-14ರಿಂದ ಡೆನ್ಮಾರ್ಕ್‌ನ ಜೆಮ್ಕೆ ಅವರನ್ನು ಪರಾಭವಗೊಳಿಸಿದರು. ತಮಗಿಂತ ಮೇಲಿನ ಕ್ರಮಾಂಕದ ಆಟಗಾರನ ವಿರುದ್ಧ ಗೆಲುವು ಸಾಧಿಸಲು ಒಂದು ಗಂಟೆ 10 ನಿಮಿಷ ತೆಗೆದುಕೊಂಡರು.

ರಾಜಾವತ್ ಅವರು ಪುರುಷರ ಸಿಂಗಲ್ಸ್‌ ಕಣದಲ್ಲಿ ಉಳಿದಿರುವ ಏಕೈಕ ಭಾರತೀಯನಾಗಿದ್ದು, ಮುಂದಿನ ಸುತ್ತಿನಲ್ಲಿ ಜಪಾನ್‌ನ ಟಕುಮಾ ಒಬಯಾಶಿ ಅವರನ್ನು ಎದುರಿಸಲಿದ್ದಾರೆ. 

ಭಾರತದ ಇನ್ನೊಬ್ಬ ಆಟಗಾರ ಆಯುಷ್‌ ಶೆಟ್ಟಿ 14-21 11-21ರಿಂದ ಜಪಾನ್‌ನ ಕೊಕಿ ವತಾನಬೆ ವಿರುದ್ಧ ಸೋಲನುಭವಿಸಿದರು. ಎಸ್‌ ಶಂಕರ್‌ ಮುತ್ತುಸ್ವಾಮಿ ಸುಬ್ರಮಣಿಯನ್‌ 16-21 17-21ರಿಂದ ಫ್ರಾನ್ಸ್‌ನ ಅಲೆಕ್ಸ್‌ ಲೇನಿಯರ್‌ ವಿರುದ್ಧ ಪರಾಭವಗೊಂಡರು.

ತಾನ್ಯಾ, ಅನುಪಮಾ ಮುನ್ನಡೆ:

ಭಾರತದ ತಾನ್ಯಾ ಹೇಮಂತ್ ಹಾಗೂ ಅನುಪಮಾ ಉಪಾಧ್ಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.

ಮೊದಲ ಸುತ್ತಿನಲ್ಲಿ ತಾನ್ಯಾ ಅವರು 21-13 20-22 21-14ರಿಂದ ಕೆನಡಾದ ಜಾಕಿ ಡೆಂಟ್‌ ಅವರನ್ನು ಸೋಲಿಸಿದರು. ಅನುಪಮಾ ಅವರು 21-11 21-11ರಿಂದ ರಚೆಲ್ ಡರಾಗ್ ಅವರನ್ನು ಪರಾಭವಗೊಳಿಸಿದರು.

ಎರಡನೇ ಸುತ್ತಿನಲ್ಲಿ ತಾನ್ಯಾಗೆ ಥಾಯ್ಲೆಂಡ್‌ನ ಬುಸಾನನ್‌ ಒಂಗ್ಬಾಮ್‌ರುಂಗ್ಫಾನ್‌ ಅವರನ್ನು; ಅನುಪಮಾ, ಕೆನಡಾದ ಮಿಚೆಲ್ಲೆ ಲೀ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT