ಬೆಂಗಳೂರು: ರಾಜ್ಯ ಮಹಿಳಾ ಬ್ಯಾಸ್ಕೆಟ್ಬಾಲ್ ಲೀಗ್ ಚಾಂಪಿಯನ್ಷಿಪ್ ಲೀಗ್ ಪಂದ್ಯದಲ್ಲಿ ಭರತ್ ಸ್ಪೋರ್ಟ್ಸ್ ಯೂನಿಯನ್ ತಂಡವು ರಿತಿಕಾ (16) ಮತ್ತು ವ್ಯೋಮಾ (13) ಅವರ ಉತ್ತಮ ಆಟದ ನೆರವಿನಿಂದ 67–32ರ ಅಂತರದಲ್ಲಿ ಅಪ್ಪಯ್ಯ ಬ್ಯಾಸ್ಕೆಟ್ಬಾಲ್ ಕ್ಲಬ್ ತಂಡದ ವಿರುದ್ಧ ಭರ್ಜರಿ ಜಯ ದಾಖಲಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇನ್ನೊಂದು ಪಂದ್ಯದಲ್ಲಿ ಕೋರಮಂಗಲ ಸ್ಪೋರ್ಟ್ಸ್ ಕ್ಲಬ್ ತಂಡವು 21–12ರಿಂದ ಕೋಲಾರ ಜಿಲ್ಲಾ ತಂಡವನ್ನು ಸೋಲಿಸಿತು. ಕೋರಮಂಗಲದ ಪರ ಯೋಗಿತಾ ಮತ್ತು ಕೋಲಾರದ ಪರ ಜಯಶ್ರೀಜಾ ತಲಾ 5 ವೈಯಕ್ತಿಕ ಸ್ಕೋರ್ ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ವಿದ್ಯಾನಗರ ತಂಡವು ದೀಪಿಕಾ (25) ಮತ್ತು ಶೀತಲ್ (10) ಅವರ ಉತ್ತಮ ಆಟದ ನೆರವಿನಿಂದ 57–43ರಿಂದ ವಿಮಾನಪುರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿತು. ವಿಮಾನಪುರದ ಪರ ಮೋನಿದೀಪ್ ರಾಣಾ 23 ವೈಯಕ್ತಿಕ ಸ್ಕೋರ್ ದಾಖಲಿಸಿದರು.

ಬೆಂಗಳೂರು ವ್ಯಾನ್ಗಾರ್ಡ್ಸ್ ತಂಡವು 63–33ರ ಬೃಹತ್ ಅಂತರದಿಂದ ವಿಜಯಪುರ ಜಿಲ್ಲಾ ತಂಡವನ್ನು ಮಣಿಸಿತು. ವ್ಯಾನ್ಗಾರ್ಡ್ಸ್ ಪರ ಪ್ರಿಯಾಂಕಾ 18, ಪ್ರಶಿತಾ 13 ವೈಯಕ್ತಿಕ ಸ್ಕೋರ್ ದಾಖಲಿಸಿ ಗೆಲುವಿಗೆ ಕಾರಣರಾದರು. ವಿಜಯಪುರ ತಂಡದ ಪರ ಲಲಿತಾ 16 ಸ್ಕೋರ್ ಗಳಿಸಿದರು.

ಎಚ್ಬಿಆರ್ ಬ್ಯಾಸ್ಕೆಟ್ಬಾಲ್ ಕ್ಲಬ್ ತಂಡವು 43–40ರಿಂದ ರೋವರ್ಸ್ ಧಾರವಾಡ ತಂಡದ ವಿರುದ್ಧ ಜಯಗಳಿಸಿತು. ಎಚ್ಬಿಆರ್ ಪರ ಸುನೈನಾ 9 ಮತ್ತು ಧಾರವಾಡದ ಪರ ದೀಪಿಕಾ 18 ವೈಯಕ್ತಿಕ ಸ್ಕೋರ್ ದಾಖಲಿಸಿದರು.

ಯಂಗ್ ಓರಿಯನ್ಸ್ ಸ್ಪೋರ್ಟ್ಸ್ ಕ್ಲಬ್ ತಂಡವು 71–16ರಿಂದ ವಿವೇಕ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಬೃಹತ್ ಜಯ ದಾಖಲಿಸಿತು. ಓರಿಯನ್ಸ್ ಪರ ಮಥುರವಾಣಿ 10 ಮತ್ತು ವಿವೇಕ್ ಕ್ಲಬ್ ಪರ ಧ್ರುತಿ 9 ವೈಯಕ್ತಿಕ ಸ್ಕೋರ್ ಗಳಿಸಿದರು.

ಯಲಹಂಕ ನ್ಯೂಟೌನ್ ಬ್ಯಾಸ್ಕೆಟ್ಬಾಲ್ ಕ್ಲಬ್ ತಂಡವು 31–10ರಿಂದ ಮಲ್ಲಸಜ್ಜನ ಬ್ಯಾಸ್ಕೆಟ್ಬಾಲ್ ಕ್ಲಬ್ ಧಾರವಾಡ ತಂಡದ ವಿರುದ್ಧ ಜಯ ಗಳಿಸಿತು. ಯಲಹಂಕ ಪರ ಹಂಸ 11 ಮತ್ತು ಮಲ್ಲಸಜ್ಜನ ತಂಡದ ಪರ ಸಹನಾ 8 ವೈಯಕ್ತಿಕ ಸ್ಕೋರ್ ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.