ಬೆಂಗಳೂರು: ಸುರಾನ ಕಾಲೇಜು ತಂಡದವರು ಬೆಂಗಳೂರು ವಿಶ್ವವಿದ್ಯಾಲಯ ಆಶ್ರಯದ ಅಂತರ ಕಾಲೇಜು ಈಜು ಚಾಂಪಿಯನ್ಷಿಪ್ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದಿದ್ದಾರೆ.

ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಸುರಾನ ಕಾಲೇಜು ಒಟ್ಟು 108 ಪಾಯಿಂಟ್ಸ್ ಕಲೆಹಾಕಿ ಮೊದಲ ಸ್ಥಾನ ಗಳಿಸಿತು.

ಈ ಕಾಲೇಜಿನ ರಯಾನ್ ಮೆಕಾಯ್ ಅವರು ಚಾಂಪಿಯನ್ಷಿಪ್ನ ಶ್ರೇಷ್ಠ ಈಜುಪಟು ಗೌರವ ಗಳಿಸಿದರು. ಅವರು 10 ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದರು.

ಯಾಕೂಬ್ ಸಲೀಂ ( 2ಚಿನ್ನ, 7 ಬೆಳ್ಳಿ, 1 ಕಂಚು) ಮತ್ತು ಎ.ಎಂ.ವೇದಾಂತ್ (2 ಚಿನ್ನ, 3 ಬೆಳ್ಳಿ ಮತ್ತು 1ಕಂಚು) ಕೂಡಾ ಮಿಂಚಿದರು.

ಚಾಂಪಿಯನ್ಷಿಪ್ನಲ್ಲಿ ಪದಕ ಗೆದ್ದ ಎಲ್ಲಾ ಈಜುಪಟುಗಳು ಜೈನ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸೆಪ್ಟೆಂಬರ್ 26ರಿಂದ 29ರವರೆಗೆ ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಈಜು ಚಾಂಪಿಯನ್ಷಿಪ್ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.