ಡರ್ಬನ್: ಭಾರತದ ಮಣಿಕಾ ಬಾತ್ರಾ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ವಿಶ್ವದ 39ನೇ ಕ್ರಮಾಂಕದ ಮಣಿಕಾ ಮಂಗಳವಾ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 11–9, 14–12, 11–4, 11–8 ರಿಂದ ವೊಂಗ್ ಕ್ಸಿನ್ ರು ಅವರನ್ನು ಸೋಲಿಸಿದರು.

ವಿಶ್ವ ಕ್ರಮಾಂಕದಲ್ಲಿ 171ನೇ ಸ್ಥಾನದಲ್ಲಿರುವ ವೊಂಗ್ ಮೇಲಿನ ಗೆಲುವಿನಿಂದ ಅವರು ಸಿಂಗಲ್ಸ್‌ನಲ್ಲಿ 32ರ ಸುತ್ತು ತಲುಪಿದ ಭಾರತದ ಏಕೈಕ ಆಟಗಾರ್ತಿಯಾಗಿ ಕಣದಲ್ಲಿ ಉಳಿದಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಶರತ್ ಕಮಲ್ ಮತ್ತು ಜಿ.ಸತ್ಯನ್ ಬೇಗನೇ ನಿರ್ಗಮಿಸಿದ್ದರು. ಶರತ್ ಸೋಮವಾರ ಹೊರಬಿದ್ದರೆ, ಸತ್ಯನ್ ಮಂಗಳವಾರ ನಡೆದ ಪಂದ್ಯದಲ್ಲಿ ವಿಶ್ವದ 9ನೇ ಕ್ರಮಾಂಕದ ಆಟಗಾರ ಡಾಂಗ್ ಕ್ಸಿಯು ಎದುರು 6–11, 6–11, 5–11, 7–11 ರಲ್ಲಿ ಸೋಲನುಭವಿಸಿದರು.

ಮಣಿಕಾ ಮತ್ತು ಸತ್ಯನ್ ಮಿಕ್ಸೆಡ್ ಡಬಲ್ಸ್ ಪಂದ್ಯ ಆಡಬೇಕಿದೆ. ಶರತ್ ಮತ್ತು ಸತ್ಯನ್ ಪುರುಷರ ಡಬಲ್ಸ್ ಪ್ರಿಕ್ವಾರ್ಟರ್‌ಫೈನಲ್ ಪಂದ್ಯವನ್ನು ಬುಧವಾರ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.