ಬರ್ಮಿಂಗ್‌ಹ್ಯಾಮ್: ಸೌರವ್ ಘೋಷಾಲ್ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ ಸ್ಕ್ವಾಷ್ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಕೂಟದ ಇತಿಹಾಸದಲ್ಲಿ ಈ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿರುವ ಸೌರವ್, ಬುಧವಾರ ನಡೆದ ಕಂಚಿನ ಪದಕದ ಸುತ್ತಿನ ಪ್ಲೇ ಆಫ್‌ನಲ್ಲಿ11-6, 11-1, 11-4ರಿಂದ ಇಂಗ್ಲೆಂಡ್‌ನ ಜೇಮ್ಸ್ ವಿಲ್‌ಸ್ಟ್ರಾಪ್ ಅವರನ್ನು ಸೋಲಿಸಿದರು.

ಸೌರವ್ ಅವರಿಗೆ ಕಾಮನ್‌ವೆಲ್ತ್ ಕೂಟದಲ್ಲಿ ಇದು ಎರಡನೇ ಪದಕ. 2018ರ ಗೋಲ್ಡ್‌ಕೋಸ್ಟ್ ಆವೃತ್ತಿಯಲ್ಲಿ ದೀಪಿಕಾ ಪಳ್ಳಿಕಲ್ ಜೊತೆಗೂಡಿ ಬೆಳ್ಳಿ ಪದಕ ಜಯಿಸಿದ್ದರು.

ಈ ಪಂದ್ಯದಲ್ಲಿ ಸೌರವ್ ಸಂಪೂರ್ಣ ಪ್ರಾಬಲ್ಯ ಮೆರೆದರು. ಸೆಮಿಫೈನಲ್‌ನಲ್ಲಿ ಸೋತಿದ್ದ ಅವರು ಕಂಚಿನ ಪದಕದ ಸುತ್ತಿನಲ್ಲಿ ಆಡುವ ಅವಕಾಶ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.