ಸೇಲಂ: ಕಬ್ಬಡ್ಡಿ ಆಟದ ವೇಳೆಯೇಕಬಡ್ಡಿ ಪಟುವೊಬ್ಬಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಸೇಲಂ ಬಳಿಯ ಮನಾದಿಕುಪ್ಪಂಪಟ್ಟಣದಲ್ಲಿ ನಡೆದಿದೆ.

ಮೃತನನ್ನು 22 ವರ್ಷದ ವಿಮಲ್ರಾಜ್ ಎಂದು ಗುರುತಿಸಲಾಗಿದೆ.ಸೇಲಂನ ‘ಸಾಮಿ ಕಬಡ್ಡಿ ಅಕಾಡೆಮಿ’ ಆಯೋಜಿಸಿದ್ದ ಕಬಡ್ಡಿ ಟೂರ್ನಿಯಲ್ಲಿ ಅವರು ಭಾಗವಹಿಸಿದ್ದರು.

ರೈಡಿಂಗ್ಗೆ ಹೋಗಿದ್ದವಿಮಲರಾಜ್ ಮೇಲೆ ಎದುರಾಳಿ ತಂಡದವರು ಆಕ್ರಮಣ ಮಾಡಿದ್ದಾರೆ. ಈ ವೇಳೆ ಎದುರಾಳಿ ತಂಡದ ಆಟಗಾರ ವಿಮಲರಾಜ್ ಮೇಲೆ ಓಡಿ ಬಂದು ಮೊಣಕಾಲು ಇಟ್ಟಿದ್ದಾನೆ. ಇದರಿಂದ ಸ್ಥಳದಲ್ಲೆ ಕುಸಿದ ವಿಮಲರಾಜ್, ಹೃದಯ ಸ್ತಂಭನದಿಂದಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತು ವಿಡಿಯೊ ವೈರಲ್ ಆಗಿದೆ. ಸೇಲಂ ಪೊಲೀಸರು ‘ಸಾಮಿ ಕಬಡ್ಡಿ ಅಕಾಡೆಮಿ’ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೃತ ವಿದ್ಯಾರ್ಥಿ ಸೇಲಂನ ಸರ್ಕಾರಿ ಕಾಲೇಜೊಂದರಲ್ಲಿ ಬಿ.ಎಸ್ಸಿ ಎರಡನೇವರ್ಷದಲ್ಲಿ ಓದುತ್ತಿದ್ದ.

ಫ್ಯಾಕ್ಟ್ ಚೆಕ್ ಬಗ್ಗೆ ಫೇಸ್ಬುಕ್ ಕಂಪನಿಯಿಂದ ಮತ್ತೊಂದು ಮಹತ್ವದ ಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.