ಬರ್ಮಿಂಗ್‌ಹ್ಯಾಂ: ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಿ.ವಿ. ಸಿಂಧು ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತವು ಚಿನ್ನ ಗೆಲ್ಲುವ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಸಿಂಧು21-19, 21-17ರಿಂದ ಸಿಂಗಪುರದ ಯೊ ಜಿಯಾ ಮಿನ್ ಅವರನ್ನು ಪರಾಭವಗೊಳಿಸಿದರು. 49 ನಿಮಿಷಗಳ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ತಾಂತ್ರಿಕವಾಗಿ ಶ್ರೇಷ್ಠ ಆಟವಾಡಿದರು.

Commonwealth Games: ಬಾಕ್ಸರ್ ಅಮಿತ್ ಪಂಘಲ್, ನೀತೂ ಘಂಘಸ್ಗೆ ಚಿನ್ನ

ಮಾಜಿ ವಿಶ್ವಚಾಂಪಿಯನ್ ಕೂಡ ಆಗಿರುವ ಸಿಂಧು, ಕಳೆದ ಎರಡು ಆವೃತ್ತಿಗಳಲ್ಲಿ ಒಂದು ಕಂಚು ಮತ್ತು ಬೆಳ್ಳಿ ಗೆದ್ದುಕೊಂಡಿದ್ದರು. ಶನಿವಾರ ನಡೆದಿದ್ದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಗೊಹ್ ವೇ ಜಿನ್ ಅವರನ್ನು 19-21, 21-14, 21-18ರಿಂದ ಮಣಿಸಿದ್ದರು.

ಮತ್ತೊಂದೆಡೆ,ಪುರುಷರ ಸಿಂಗಲ್ಸ್ ವಿಭಾಗದಲ್ಲಿಲಕ್ಷ್ಯ ಸೇನ್ ಅವರುಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ಲಕ್ಷ್ಯ, ಸೆಮಿಫೈನಲ್ ಪಂದ್ಯದಲ್ಲಿ21-10, 18-21, 21-16ರಿಂದ ಸಿಂಗಪುರದ ಜಿಯಾ ಹೆಂಗ್ ಟೆಹ್ ಅವರನ್ನು ಮಣಿಸಿದರು. ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಅಮೋಘ ಫೋರ್‌ಹ್ಯಾಂಡ್ ಹೊಡೆತಗಳ ಮೂಲಕ ಲಕ್ಷ್ಯ ಗಮನಸೆಳೆದರು.

Commonwealth Games 2022 ಹಾಕಿ: ಕಂಚಿನ ಪದಕ ಗೆದ್ದ ಭಾರತ ಮಹಿಳಾ ತಂಡ

ಈ ಮಧ್ಯೆ, ಹಾಕಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತದ ವನಿತೆಯರು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರೆ, ಮಹಿಳೆಯರ 48 ಕೆ.ಜಿ. ವಿಭಾಗದ ಬಾಕ್ಸಿಂಗ್‌ನಲ್ಲಿ ನೀತೂ ಘಂಘಸ್ ಹಾಗೂ ಪುರುಷರ 51 ಕೆ.ಜಿ. ವಿಭಾಗದಲ್ಲಿ ಅಮಿತ್ ಪಂಘಲ್ ಅವರು ಚಿನ್ನದ ಪದಕ ಜಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.