ನವದೆಹಲಿ: ಅಖಿಲ ಭಾರತ ಟೆನಿಸ್ ಸಂಸ್ಥೆಯು (ಎಐಟಿಎ) ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಸಹಯೋಗದಲ್ಲಿ ತನ್ನ ಕೋಚ್ಗಳಿಗೆ ಆನ್ಲೈನ್ ತರಬೇತಿ ನೀಡಲು ಮುಂದಾಗಿದೆ.

ಇದೇ ತಿಂಗಳ 27ರಿಂದ ಮೇ 9ರವರೆಗೆ ಒಟ್ಟು 12 ಸೆಷನ್ಗಳಲ್ಲಿ ‘ವೆಬಿನಾರ್’ ನಡೆಯಲಿದೆ.

ಟೆನಿಸ್ ತಜ್ಞರು ಜೂಮ್ ಆ್ಯಪ್ ಮೂಲಕ ಲಾಕ್ಡೌನ್ ಅವಧಿಯಲ್ಲಿ ಟೆನಿಸ್, ಫಿಟ್ನೆಸ್ ಟ್ರೈನಿಂಗ್, ನ್ಯೂಟ್ರಿಷಿಯನ್, ಮೆಂಟಲ್ ಟ್ರೈನಿಂಗ್, ಪ್ರಥಮ ಚಿಕಿತ್ಸೆ, ಮಾಹಿತಿ ಮತ್ತು ಸಂವಹನ ಹೀಗೆ ಅನೇಕ ವಿಷಯಗಳ ಬಗ್ಗೆ ಕೋಚ್ಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಎಐಟಿಎ ಕೋಚ್ಗಳ ಶಿಕ್ಷಣ ಕಾರ್ಯಕ್ರಮದ ನಿರ್ದೇಶಕ ಸುರೇಶ್ ಸೋನಾಚಲಂ ಹಾಗೂ ಹಿರಿಯ ಆಡಳಿತಗಾರ ನಾರ್ ಸಿಂಗ್ ಅವರು ‘ವೆಬಿನಾರ್’ ಅನ್ನು ಉದ್ಘಾಟಿಸಲಿದ್ದಾರೆ.

‘ಗ್ಯಾರಿ ಓಬ್ರಿಯನ್, ಬಾಲಚಂದ್ರನ್ ಮಣಿಕಾಂತ್, ಚೆಲ್ಸ್ಟನ್ ಪಿಂಟೊ, ನಂದನ್ ಬಾಲ, ಶಿನಿ ಚಂದ್ರನ್, ಖವಲಜೀತ್ ಸಿಂಗ್, ಹೇಮಂತ್ ಮತ್ತು ಮನೋಜ್ ವೈದ್ಯ ಅವರು ಕೋಚ್ಗಳಿಗೆ ತರಬೇತಿ ನೀಡಲಿದ್ದಾರೆ’ ಎಂದು ಎಐಟಿಎ ತಿಳಿಸಿದೆ.

ಪ್ರತಿ ಸೆಷನ್ ಅನ್ನು 40 ನಿಮಿಷಗಳ ಎರಡು ಹಂತಗಳನ್ನಾಗಿ ವಿಭಜಿಸಲಾಗುತ್ತದೆ. ಎರಡು ಹಂತಗಳ ನಡುವಣ 30 ನಿಮಿಷಗಳನ್ನು ಪ್ರಶ್ನೋತ್ತರ ವೇಳೆಯಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.