ಬೆಂಗಳೂರು: ಸೌಮ್ರಿತಾ ವರ್ಮಾ ಅವರು ಇಲ್ಲಿ ನಡೆಯುತ್ತಿರುವ ಐಟಿಎಫ್ ಜೆ30 ಟೆನಿಸ್ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಸಾಯಿ ಜಾನ್ವಿ ಅವರನ್ನು 0-6, 6-2, 7-5 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದರು.

ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಸೌಮ್ರಿತಾ ನಂತರ ಪುಟಿದೆದ್ದು, ನಂತರದ ಎರಡು ಗೇಮ್‌ಗಳಲ್ಲಿ ಮೇಲುಗೈ ಸಾಧಿಸಿದರು. ಅವರು ನಾಲ್ಕರ ಘಟ್ಟದಲ್ಲಿ ಕರ್ನಾಟಕದ 16 ವರ್ಷದ ಅಮೋದಿನಿ ನಾಯಕ್ ಅವರನ್ನು ಎದುರಿಸಲಿದ್ದಾರೆ.

ಅಮೋದಿನಿ ಅವರು 6-4, 6-2ರಿಂದ ಅವನಿ ಚಿತಾಲೆ ಅವರನ್ನು ಮಣಿಸಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಲಕ್ಷ್ಮಿಶ್ರೀ ದಂಡು ಅವರು 6-4, 2-6, 5-7ರಿಂದ ಹರ್ಷಿಣಿ ನಾಗರಾಜ್ ಅವರನ್ನು ಪರಾಭವಗೊಳಿಸಿದರು. ಮತ್ತೊಂದು ಪಂದ್ಯದಲ್ಲಿ ಆರ್. ಸೌಮ್ಯಾ ಅವರು 6-0, 6-4ರಿಂದ ಕಶ್ವಿ ಸುನಿಲ್ ಅವರನ್ನು ಸೋಲಿಸಿದರು.

ಸೆಮಿಗೆ ಸೆಹಜ್: ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕರ್ನಾಟಕದ ಎರಡನೇ ಶ್ರೇಯಾಂಕದ ಗಂಧರ್ವ ಕೊತ್ತಪಲ್ಲಿ ಅವರು 3-6, 2-6ರಿಂದ ಆರಾಧ್ಯ ಕ್ಷಿತಿಜ್ ಅವರಿಗೆ ಶರಣಾದರು. ಅಗ್ರ ಶ್ರೇಯಾಂಕದ ಸೆಹಜ್ ಸಿಂಗ್ ಪವಾರ್ 6-2, 6-2ರಿಂದ ಕೇಶವ್ ಗೋಯೆಲ್ ಅವರನ್ನು ಸೋಲಿಸಿದರು. ಇತರ ಪಂದ್ಯದಲ್ಲಿ ಚಂದನ್ ಶಿವರಾಜ್ 7-5, 5-7, 7-6 (7-5)ರಿಂದ ಸಮರ್ಥ್ ಸಹಿತಾ ಅವರನ್ನು, ಕೆವಿನ್ ಟೀಟಸ್ ಸುರೇಶ್ 7-6 (7-3), 6-1ರಿಂದ ಧೀರಜ್ ರೆಡ್ಡಿ ಅವರನ್ನು ಮಣಿಸಿದರು.

ಸೆಮಿಫೈನಲ್ ಪಂದ್ಯಗಳು: ಬಾಲಕರ ವಿಭಾಗದಲ್ಲಿ ಸೆಹಜ್ ಸಿಂಗ್ ಪವಾರ್– ಚಂದನ್ ಶಿವರಾಜ್; ಆರಾಧ್ಯ ಕ್ಷಿತಿಜ್– ಕೆವಿನ್ ಟೈಟಸ್ ಸುರೇಶ್ ಪೈಪೋಟಿ ನಡೆಸುವರು. ಬಾಲಕಿಯ ವಿಭಾಗದಲ್ಲಿ ಸೌಮ್ರಿತಾ ವರ್ಮಾ– ಅಮೋದಿನಿ ನಾಯಕ್; ಲಕ್ಷ್ಮಿಶ್ರೀ–ಸೌಮ್ಯಾ ಸೆಣಸಾಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.