ಬೆಂಗಳೂರು: ಮೂರನೇ ಆವೃತ್ತಿಯ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯು ಫೆಬ್ರುವರಿ 10ರಿಂದ 16ರವರೆಗೆ ಕಬ್ಬನ್ ಉದ್ಯಾನದಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಅಂಗಳದಲ್ಲಿ ನಡೆಯಲಿದೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ 100ರೊಳಗೆ ಸ್ಥಾನ ಹೊಂದಿರುವ ನಾಲ್ಕು ಮಂದಿ ಆಟಗಾರರು ಲೀಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ಬುಧವಾರ ತಿಳಿಸಿದ್ದಾರೆ.

ಲಿಥುವೇನಿಯಾದ ರಿಕಾರ್ಡಸ್ ಬೆರಾಂಕಿಸ್ (69ನೇ ಸ್ಥಾನ), ಇಟಲಿಯ ಸ್ಟೆಫಾನೊ ಟ್ರಾವಗ್ಲಿಯಾ (74), ಜಪಾನ್ನ ಜರ್ನಿಮನ್ ಯುಯಿಚಾ ಸುಗಿಟಾ (91) ಮತ್ತು ಆಸ್ಟ್ರೇಲಿಯಾದ ಜೇಮ್ಸ್ ಡಕ್ವರ್ಥ್ (94) ಅವರು ಟೂರ್ನಿಯ ಆಕರ್ಷಣೆಯಾಗಿದ್ದಾರೆ.

₹ 1.15 ಕೋಟಿ ಬಹುಮಾನ ಮೊತ್ತದ ಟೂರ್ನಿಯಲ್ಲಿ ಭಾರತದ ಆಟಗಾರ, ಹಾಲಿ ಚಾಂಪಿಯನ್ ಪ್ರಜ್ಞೇಶ್ ಗುಣೇಶ್ವರನ್ ಮತ್ತು ಸುಮಿತ್ ನಗಾಲ್ ಅವರೂ ಭಾಗವಹಿಸಲಿದ್ದಾರೆ. ಪ್ರಜ್ಞೇಶ್ ಮತ್ತು ಸುಮಿತ್ ವಿಶ್ವ ರ್ಯಾಂಕಿಂಗ್ನಲ್ಲಿ ಕ್ರಮವಾಗಿ 123 ಮತ್ತು 131ನೇ ಸ್ಥಾನಗಳಲ್ಲಿದ್ದಾರೆ.

ರಾಮಕುಮಾರ್ ರಾಮನಾಥನ್ (185) ಹಾಗೂ ಶಶಿಕುಮಾರ್ ಮುಕುಂದ್ (267) ಅವರೂ ಕಣಕ್ಕಿಳಿಯಲಿದ್ದಾರೆ.

ಮುಖ್ಯ ಸುತ್ತಿನಲ್ಲಿ ಒಟ್ಟು 48 ಮಂದಿ ಆಡಲಿದ್ದು, ಈ ಪೈಕಿ 40 ಆಟಗಾರರು ನೇರ ಅರ್ಹತೆ ಗಳಿಸಿದ್ದಾರೆ. ಐದು ಮಂದಿಗೆ ‘ವೈಲ್ಡ್ ಕಾರ್ಡ್’ ಸಿಗಲಿದೆ. ಅರ್ಹತಾ ಹಂತದಲ್ಲಿ ಗೆದ್ದುಬಂದ ಇಬ್ಬರೂ ಮುಖ್ಯ ಸುತ್ತಿನಲ್ಲಿ ಸೆಣಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.