ಸ್ಟುಟ್ಗರ್ಟ್:ರೋಹನ್ ಬೋಪಣ್ಣ – ಶಪೋವಲೋವ ಜೋಡಿ ಎಟಿಪಿ ಮರ್ಸಿಡಿಸ್ ಕಪ್ ಟೆನಿಸ್ ಟೂರ್ನಿಯ ಫೈನಲ್ನಲ್ಲಿ ಭಾನುವಾರ ಸೋಲನುಭವಿಸಿತು. ಇದರಿಂದ ವರ್ಷದ ಎರಡನೇ ಪ್ರಶಸ್ತಿ ಗೆಲ್ಲುವ ಭಾರತದ ರೋಹನ್ ಆಸೆ ಸ್ವಲ್ಪದರಲ್ಲೇ ತಪ್ಪಿಹೋಯಿತು.

ಶ್ರೇಯಾಂಕರಹಿತ ರೋಹನ್ – ಕೆನಡಾದ ಶಪೋವಲೋವ್ ಜೋಡಿ 5–7, 3–6ರಲ್ಲಿ ಅಗ್ರ ಶ್ರೇಯಾಂಕದ ಬ್ರೂನೊ ಸೋರೇಸ್– ಜಾನ್ಪೀರ್ಸ್ ಜೋಡಿಗೆ ಮಣಿಯಿತು.

ಬೋಪಣ್ಣ, ಇದಕ್ಕೆ ಮೊದಲು ದಿವಿಜ್ ಶರಣ್ ಜೊತೆಗೂಡಿ ಪುಣೆಯಲ್ಲಿ ನಡೆದ ವರ್ಷಾರಂಭದಲ್ಲಿ ನಡೆದ ಟಾಟಾ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಬೋಪಣ್ಣ, ಕೆನಡಾ ಆಟಗಾರನ ಜೊತೆಗೂಡಿ ಆಡುತ್ತಿರುವ ಮೂರನೇ ಟೂರ್ನಿ ಇದು. ಇಂಡಿಯನ್ ವೆಲ್ಸ್ ಮತ್ತು ಮಯಾಮಿ ಮಾಸ್ಟರ್ಸ್ ಟೂರ್ನಿಯಲ್ಲೂ ಒಟ್ಟಿಗೆ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.