ಫ್ಲೊರಿಡಾ: ಭಾರತದಡಬಲ್ಸ್ ವಿಭಾಗದ ಎರಡನೇ ರ್ಯಾಂಕಿನ ಆಟಗಾರ ದಿವಿಜ್ ಶರಣ್ ಅವರು ನ್ಯೂಜಿಲೆಂಡ್ನ ಅರ್ಟೆಮ್ ಸಿಟಾಕ್ ಜೊತೆಗೂಡಿ ಡೆಲ್ರೆ ಬೀಚ್ ಓಪನ್ಟೆನಿಸ್ ಟೂರ್ನಿಯ ಕ್ವಾರ್ಟರ್ಫೈನಲ್ಗೆ ಕಾಲಿಟ್ಟಿದ್ದಾರೆ.

ಬುಧವಾರ ನಡೆದ ಪ್ರೀಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ 5–7, 6–4, 10–7ರಿಂದ ಸ್ವೀಡನ್ ಹಾಗೂ ಫ್ರಾನ್ಸ್ನ ಆ್ಯಂಡ್ರೆ ಗೊರಾನ್ಸನ್–ಉಗೊ ಹಂಬರ್ಟ್ ಎದುರು ಅವರು ಗೆದ್ದರು.

ಮೊದಲ ಸೆಟ್ನಲ್ಲಿ ಹಿನ್ನಡೆ ಕಂಡರೂ ಛಲದಿಂದ ಆಡಿದ ಭಾರತ–ಕಿವೀಸ್ ಜೋಡಿ, ಎರಡನೇ ಸೆಟ್ನಲ್ಲಿ ಶೇ. 75 ಸರ್ವ್ ಪಾಯಿಂಟ್ಸ್ಗಳನ್ನು ಗಳಿಸಿಕೊಂಡರು. ಟೈಬ್ರೇಕರ್ವರೆಗೆ ಸಾಗಿದ ಮೂರನೇ ಸೆಟ್ನಲ್ಲಿ 10–7ರಿಂದ ಗೆಲುವು ದಿವಿಜ್–ಸಿಟಾಕ್ ಅವರಿಗೆ ಒಲಿಯಿತು.

ಎಂಟರ ಘಟ್ಟದ ಹಣಾಹಣಿಯಲ್ಲಿ ದಿವಿಜ್–ಸಿಟಾಕ್ ಅವರು ಅಮೆರಿಕದ ಮೈಕ್ ಹಾಗೂ ಬಾಬ್ ಬ್ರಯಾನ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ಪ್ರೀಕ್ವಾರ್ಟರ್ಫೈನಲ್ನಲ್ಲಿ ಬಾಬ್ ಹಾಗೂ ಮೈಕ್ ಜೋಡಿಗೆ ವಾಕ್ಓವರ್ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.