ಗ್ರ್ಯಾನ್ಸ್ಲಾಮ್ನಲ್ಲಿ 20 ಕಿರೀಟ ಮುಡಿಗೇರಿಸಿಕೊಂಡ ಏಕೈಕ ಆಟಗಾರ. ವೃತ್ತಿಬದುಕಿನಲ್ಲಿ ಸಾವಿರಕ್ಕೂ ಅಧಿಕ ಪಂದ್ಯಗಳನ್ನು ಗೆದ್ದ ಹಿರಿಮೆ. ಸಿಂಗಲ್ಸ್ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 310 ವಾರಗಳ ಕಾಲ ಅಗ್ರಸ್ಥಾನದಲ್ಲಿ ವಿರಾಜಮಾನವಾದ ಹೆಗ್ಗಳಿಕೆ....

ಹೀಗೆ ಟೆನಿಸ್ ಲೋಕದಲ್ಲಿ ಹತ್ತು ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿರುವ ‘ಚಿರ ಯುವಕ’ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್.

1998ರಲ್ಲಿ ವೃತ್ತಿಪರ ಟೆನಿಸ್ಗೆ ಅಡಿ ಇಟ್ಟ ಫೆಡರರ್, ಎರಡು ದಶಕಗಳ ಪಯಣದಲ್ಲಿ ಸಾಧಿಸಿದ್ದು ಅಗಾಧ. ವಿಂಬಲ್ಡನ್ನಲ್ಲಿ ಅವರು ಜಯಿಸಿದ ಟ್ರೋಫಿಗಳು ಎಂಟು. ಈ ಸಾಧನೆ ಮಾಡಿದ ಮೊದಲ ಆಟಗಾರ. ಅಮೆರಿಕ ಓಪನ್ನಲ್ಲಿ ಸತತ ಐದು ಬಾರಿ ಕಿರೀಟ ಮುಡಿಗೇರಿಸಿಕೊಂಡ ದಾಖಲೆಯೂ ಅವರ ಹೆಸರಿನಲ್ಲಿದೆ.

‘ಸೂಪರ್ ಮ್ಯಾನ್’ ರೋಜರ್, ತಮ್ಮ ಸಾಧನೆಯ ಕಿರೀಟಕ್ಕೆ ಈಗ ಮತ್ತೊಂದು ಗರಿ ಸೇರ್ಪಡೆ ಮಾಡಿಕೊಂಡಿದ್ದಾರೆ. ವೃತ್ತಿಬದುಕಿನಲ್ಲಿ 100 ಎಟಿಪಿ ಪ್ರಶಸ್ತಿ ಜಯಿಸಿ, ಈ ದಾಖಲೆ ನಿರ್ಮಿಸಿದ ವಿಶ್ವದ ಎರಡನೇ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಹೋದ ವಾರ ನಡೆದ ದುಬೈ ಓಪನ್ನಲ್ಲಿ ಟ್ರೋಫಿ ಜಯಿಸುವ ಮೂಲಕ ‘ಸೆಂಚುರಿ ಕ್ಲಬ್’ ಸೇರಿದ್ದಾರೆ. 37ನೇ ವಯಸ್ಸಿನಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿದೆ.

ಜಿಮ್ಮಿ ದಾಖಲೆ ಅಳಿಸುವರೇ?

‘ಓಪನ್ ಯುಗ’ದಲ್ಲಿ ಪುರುಷರ ಸಿಂಗಲ್ಸ್ನಲ್ಲಿ 109 ಎಟಿಪಿ ಪ್ರಶಸ್ತಿಗಳನ್ನು ಗೆದ್ದ ಏಕೈಕ ಆಟಗಾರ ಎಂಬ ದಾಖಲೆ ಅಮೆರಿಕದ ಜೇಮ್ಸ್ ಸ್ಕಾಟ್ ಕಾನ್ನರ್ಸ್ (ಜಿಮ್ಮಿ ಕಾನ್ನರ್ಸ್) ಹೆಸರಿನಲ್ಲಿದೆ.

19ನೇ ವಯಸ್ಸಿನಲ್ಲಿ (1972) ಮೊದಲ ಎಟಿಪಿ ಗರಿ ಮುಡಿಗೇರಿಸಿಕೊಂಡಿದ್ದ ಜಿಮ್ಮಿ, 1989ರಲ್ಲಿ 109ನೇ ಟ್ರೋಫಿ ಜಯಿಸಿದ್ದರು. ಮೂರು ದಶಕಗಳಷ್ಟು ಹಳೆಯದಾದ ಈ ದಾಖಲೆಯನ್ನು ಫೆಡರರ್ ಅಳಿಸಿ ಹಾಕುವರೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಫೆಡರರ್ ಅವರ ಈ ಹಾದಿ ಜಟಿಲ ಎಂದೇ ಹೇಳಲಾಗುತ್ತಿದೆ. 37ರ ಹರೆಯದ ಈ ಆಟಗಾರ, ಮುಂದೆ ಆಡುವಂತಹ ಟೂರ್ನಿಗಳಲ್ಲಿ ನೊವಾಕ್ ಜೊಕೊವಿಚ್, ರಫೆಲ್ ನಡಾಲ್ ಅವರಂತಹ ದಿಗ್ಗಜರು ಮತ್ತು ಅಲೆಕ್ಸಾಂಡರ್ ಜ್ವೆರೆವ್, ಕರೆನ್ ಕಚನೋವ್, ಬೋರ್ನಾ ಕೊರಿಕ್ ಮತ್ತು ಸ್ಟೆಫಾನೊಸ್ ಸಿಸಿಪಸ್ ಅವರಂತಹ ಯುವಕರ ಸವಾಲು ಮೀರಿ ನಿಲ್ಲುವುದು ಕಷ್ಟ ಎಂಬ ಮಾತು ಇದೆ. ನೂರರ ಗಡಿ ಮುಟ್ಟಿದವರಿಗೆ ಇನ್ನು ಹತ್ತು ಪ್ರಶಸ್ತಿ ಜಯಿಸುವುದು ಕಷ್ಟವೇ ಅಲ್ಲ ಎಂದೂ ಕೆಲ ಟೆನಿಸ್ ಪಂಡಿತರು ನುಡಿದಿದ್ದಾರೆ. ಇದಕ್ಕೆ ಅವರು ನೀಡುವ ಉದಾಹರಣೆ ಹೋದ ವರ್ಷ ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿ.

ಗಾಯದಿಂದ ಗುಣಮುಖರಾದ ನಂತರ ಫೆಡರರ್ ಕಣಕ್ಕಿಳಿದಿದ್ದ ಮೊದಲ ಟೂರ್ನಿ ಅದಾಗಿತ್ತು. ಎಲ್ಲಾ ಪಂದ್ಯಗಳಲ್ಲೂ ಅಮೋಘ ಸಾಮರ್ಥ್ಯ ತೋರಿದ್ದ ರೋಜರ್, ಫೈನಲ್ನಲ್ಲಿ ಕ್ರೊವೇಷ್ಯಾದ ಮರಿನ್ ಸಿಲಿಕ್ ಅವರನ್ನು ಮಣಿಸಿ ಆರನೇ ಸಲ ಚಾಂಪಿಯನ್ ಆಗಿದ್ದರು.

ಫೆಡರರ್ ಅವರ ಛಲ, ಹೋರಾಟದ ಮನೋಭಾವ, ಕ್ರೀಡೆಯ ಬಗ್ಗೆ ಹೊಂದಿರುವ ಬದ್ಧತೆ ಪ್ರಶ್ನಾತೀತ. ಹೀಗಾಗಿಯೇ ಅವರನ್ನು ಅಭಿಮಾನಿಗಳು ಪ್ರೀತಿಯಿಂದ G.O.A.T ಎಂದು ಕರೆಯುತ್ತಾರೆ. ಇದರರ್ಥ ಸಾರ್ವಕಾಲಿಕ ಶ್ರೇಷ್ಠ ಆಟಗಾರ (ಗ್ರೇಟೆಸ್ಟ್ ಆಫ್ ಆಲ್ ಟೈಮ್).

ವಯಸ್ಸು ಸಂಖ್ಯೆ ಮಾತ್ರ. ಸಾಧನೆಗೆ ಅದು ಎಂದೂ ಅಡ್ಡಿಯಾಗದು ಎಂಬ ಮಾತು ರೋಜರ್ಗೆ ಅಕ್ಷರಶಃ ಅನ್ವಯಿಸುತ್ತದೆ. ತಮ್ಮ ವಾರಿಗೆಯ ಆಟಗಾರರೆಲ್ಲಾ ನಿವೃತ್ತಿಯ ಜೀವನ ಸಾಗಿಸುತ್ತಿರುವ ಹೊತ್ತಿನಲ್ಲಿ ಫೆಡರರ್ ಇನ್ನೂ ಅಂಗಳದಲ್ಲಿ ಮಿಂಚು ಹರಿಸುತ್ತಿದ್ದಾರೆ. ಹೊಸ ಪೀಳಿಗೆಯ ಆಟಗಾರರಿಗೆ ಸಡ್ಡು ಹೊಡೆಯಬೇಕಾದರೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂಬುದನ್ನು ಮನಗಂಡಿರುವ ಅವರು ಅದಕ್ಕೂ ಹೆಚ್ಚು ಒತ್ತು ನೀಡುತ್ತಿದ್ದಾರೆ. ಸದ್ಯ ಅವರ ‘ಫಾರ್ಮ್’ ಗಮನಿಸಿದರೆ ಒಲಿಂಪಿಕ್ಸ್ವರೆಗೂ ಆಡುವುದು ಖಚಿತ. ಹಾಗೊಮ್ಮೆ ಇನ್ನು ಎರಡು ವರ್ಷ ಆಡಿದ್ದೇ ಆದರೆ ಜಿಮ್ಮಿ ದಾಖಲೆ ಮೀರಿ ನಿಲ್ಲುವುದು ಶತಃ ಸಿದ್ಧ ಎಂಬ ಅದಮ್ಯ ವಿಶ್ವಾಸದಲ್ಲಿ ಅವರ ಅಭಿಮಾನಿಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.