ಕೋಲ್ಕತ್ತ: ಭಾರತ ಡೇವಿಸ್ ಕಪ್ ಟೆನಿಸ್ ತಂಡದ ಮಾಜಿ ಕೋಚ್ ಅಖ್ತರ್ ಅಲಿ (83) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿ ನಿಧನರಾದರು. ಇತ್ತೀಚೆಗೆ ಅವರಿಗೆ ಪ್ರಾಸ್ಪೇಟ್ ಕ್ಯಾನ್ಸರ್ ಇರುವುದೂ ದೃಢಪಟ್ಟಿತ್ತು.

ಭಾರತ ಡೇವಿಸ್ ಕಪ್ ತಂಡದ ಸದ್ಯದ ಕೋಚ್ ಜೀಶಾನ್ ಅಲಿ ಅವರು ಅಕ್ಬರ್ ಅಲಿಯ ಪುತ್ರ.

ಆಕ್ರಮಣಕಾರಿ ಸರ್ವ್ ಆಟದ ರೀತಿಗೆ ಒತ್ತು ನೀಡಿದ ಅಖ್ತರ್, ಪುತ್ರ ಜೀಶಾನ್, ಲಿಯಾಂಡರ್ ಪೇಸ್ ಸೇರಿದಂತೆ ಅನೇಕ ಆಟಗಾರರ ವೃತ್ತಿಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಭಾರತದ ಪ್ರಮುಖ ಆಟಗಾರರಾದ ವಿಜಯ್ ಅಮೃತರಾಜ್ ಹಾಗೂ ರಮೇಶ್ ಕೃಷ್ಣನ್ ಕೂಡ ಅಕ್ಬರ್ ಅವರ ತರಬೇತಿಯಿಂದ ಪ್ರಭಾವಿತರಾಗಿದ್ದರು.

ದೆಹಲಿ ಟೆನಿಸ್ ಸಂಸ್ಥೆಯಲ್ಲಿ (ಡಿಎಲ್‌ಟಿಎ) ಜೂನಿಯರ್ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿದ್ದ ಜೀಶಾನ್, ತಂದೆಯ ಸಾವಿನ ಸುದ್ದಿ ತಿಳಿದು ಕೋಲ್ಕತ್ತಕ್ಕೆ ಮರಳಿದರು.

1958ರಿಂದ 64ರವರೆಗೆ ಎಂಟು ಡೇವಿಸ್ ಕಪ್ ಪಂದ್ಯಗಳನ್ನು ಆಡಿದ್ದ ಅಖ್ತರ್, ತಂಡದ ನಾಯಕ ಹಾಗೂ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.