ಕಲಬುರಗಿ: ಬೆಂಗಳೂರಿನ ಧೀರಜ್ ಕೆ. ಶ್ರೀನಿವಾಸ್ ಅವರು ಭಾನುವಾರ ಇಲ್ಲಿ ಆರಂಭವಾದ ಐಟಿಎಫ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಹಂತದಲ್ಲಿ ಜಯಿಸಿದರು. ಆದರೆ ಕಣದಲ್ಲಿರುವ ಕರ್ನಾಟಕದ ಉಳಿದ ಆಟಗಾರರು ನಿರಾಶೆ ಅನುಭವಿಸಿದರು.

ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಟಿಎಫ್ ಪುರುಷರ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬೆಂಗಳೂರಿನ ಧೀರಜ್ ಅವರು, ಮುಂಬೈನ ಪ್ರಜ್ವಲ್ ತಿವಾರಿ ವಿರುದ್ಧ 6–2, 6–2 ಸೆಟ್ಗಳಿಂದ ಗೆದ್ದು 2ನೇ ಸುತ್ತಿಗೆ ಪ್ರವೇಶಿಸಿದರು. ಅಲ್ಲಿ ಅವರು ಮುಂಬೈನ ಉದಿತ್ ಕಾಂಬೋಜ್ ಅವರನ್ನು ಎದುರಿಸಲಿದ್ದಾರೆ.

ಮೈಸೂರಿನ ಯೋಗಿನ್ ಎಸ್. ಪ್ರಕಾಶ್ ಅವರು 4–6, 4–6ರಿಂದ ಪ್ರಣವ್ ಕಾರ್ತಿಕ್ ಎದುರು ಪರಾಭವಗೊಂಡರು. ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಜೇಸನ್ ಡೇವಿಡ್ 2–6, 2–6ರಿಂದ ರೋಹನ್ ಮೆಹ್ರಾ ಎದುರು ಸೋತರು. ಇನ್ನೊಂದು ಪಂದ್ಯದಲ್ಲಿ ಒಡಿಶಾದ ಕಬೀರ್ ಹನ್ಸ್ ಎದುರು 6–4, 2–6, 10–8ರಿಂದ ಟೈಬ್ರೇಕರ್ನಲ್ಲಿ ಒ. ಜಯಪ್ರಕಾಶ್ ಅವರನ್ನು ಮಣಿಸಿದರು.

ಟೂರ್ನಿಯ ಅಗ್ರಶ್ರೇಯಾಂಕದ ಆಟಗಾರ ಸಿದ್ಧಾಂತ್ ಬಂಥಿಯಾ, ಕಬೀರ್ ಹನ್ಸ್, ವಿಯೆಟ್ನಾಂನ ಹಾ ಮಿನ್ಹ ಡಕ್ ವು, ಇಂಡೋನೇಷ್ಯಾದ ಅಂಥೋನಿ ಸುಸಾಂತೊ ಅರ್ಹತಾ 2ನೇ ಸುತ್ತಿಗೆ ಪ್ರವೇಶ ಪಡೆದರು.

ಸಿದ್ಧಾಂತ ಬಂಥಿಯಾ ಅವರು, ಧರ್ಮಿಲ್ ಶಾ ಅವರನ್ನು 6–0, 6–1 ನೇರ ಸೆಟ್ಗಳಿಂದ ಪರಾಭವಗೊಳಿಸಿದರು. ವಿಯೆಟ್ನಾಂನ ಹಾ ಮಿನ್ಹ ಡಕ್ ವು ಅವರು, ಭಾರತದ ಅನುರಾಗ್ ಅಗರವಾಲ್ ಅವರನ್ನು 6–1, 6–0 ಸೆಟ್ಗಳಿಂದ ಮಣಿಸಿದರು. ಇಂಡೋನೇಷ್ಯಾದ ಅಂಥೋನಿ ಅವರು, ಭಾರತದ ಶಿವಂ ಖನ್ನಾ ಅವರನ್ನು 6–4, 6–1 ಸೆಟ್ಗಳಿಂದ ಪರಾಭವಗೊಳಿಸಿ, ಮುಂದಿನ ಸುತ್ತಿಗೆ ಪ್ರವೇಶಿಸಿದರು. ಉಳಿದಂತೆ ಪ್ರಣವ್ ಕಾರ್ತಿಕ್, ನಿತಿನ್ ಕುಮಾರ್ ಸಿನ್ಹಾ, ಯಶ್ ಚೌರಾಸಿಯಾ, ಮಾನ್ ಕೇಶರ್ವಾನಿ, ಮುನಿ ಅನಂತ ಮಣಿ, ಪ್ರಿಯಾಂಶು ಚೌಧರಿ ಅರ್ಹತಾ 2ನೇ ಸುತ್ತಿಗೆ ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.