ಬೆಂಗಳೂರು: ಕರ್ನಾಟಕದ ಬಿ.ಆರ್.ನಿಕ್ಷೇಪ್ ಮತ್ತು ದೆಹಲಿಯ ಅಲೆಕ್ಸ್ ಸೋಲಂಕಿ ಅವರು ಮಹಾರಾಷ್ಟ್ರದಲ್ಲಿ ನಡೆದ ಎಐಟಿಎ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ರನ್ನರ್ಸ್ ಅಪ್ ಆಗಿದ್ದಾರೆ.

ಗುರುವಾರ ನಡೆದ ಫೈನಲ್‌ನಲ್ಲಿ ನಿಕ್ಷೇಪ್ ಮತ್ತು ಅಲೆಕ್ಸ್, ಅರ್ಮಾನ್ ಭಾಟಿಯಾ ಮತ್ತು ಐಸಾಕ್ ಇಕ್ಬಾಲ್ ಎದುರು ಪರಾಭವಗೊಂಡರು.

ಸಿಂಗಲ್ಸ್ ವಿಭಾಗದಲ್ಲೂ ನಿಕ್ಷೇಪ್ ಸವಾಲು ಅಂತ್ಯವಾಯಿತು. ಅರ್ಮಾನ್ ಭಾಟಿಯಾ ಎದುರಿನ ಸೆಮಿಫೈನಲ್ ಪಂದ್ಯದ ವೇಳೆ ಗಾಯಗೊಂಡ ಬೆಂಗಳೂರಿನ ಆಟಗಾರ ಅಂಗಳ ತೊರೆದರು.

ಮೊದಲ ಸೆಟ್‌ನಲ್ಲಿ 4–6ರಿಂದ ಹಿನ್ನಡೆ ಕಂಡ ನಿಕ್ಷೇಪ್ ಎರಡನೇ ಸೆಟ್‌ನಲ್ಲಿ ಮಿಂಚಿದರು. 6–0ರಿಂದ ಎದುರಾಳಿಯನ್ನು ಮಣಿಸಿದ ಅವರು 1–1ರ ಸಮಬಲಕ್ಕೆ ಕಾರಣರಾದರು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಉಭಯ ಆಟಗಾರರು 4–4ರಿಂದ ಸಮಬಲ ಹೊಂದಿದ್ದ ವೇಳೆ ನಿಕ್ಷೇಪ್ ತೊಡೆಸಂದು ನೋವಿನಿಂದ ಬಳಲಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.