ಪ್ಯಾರಿಸ್: ಸ್ಪೇನ್ ಆಟಗಾರರಫೇಲ್ ನಡಾಲ್ ಸ್ವಿಟ್ಜರ್ಲ್ಯಾಂಡ್ನ ಸ್ಟ್ಯಾನ್ ವಾವ್ರಿಂಕಾ ಎದುರು ಗುರುವಾರ ನಡೆದ ಪಂದ್ಯದಲ್ಲಿ 6–4, 6–4 ಅಂತರದನೇರ ಗೆಲುವು ಸಾಧಿಸಿ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಪೈನಲ್ಗೆ ಲಗ್ಗೆ ಇಟ್ಟರು.

ವಾವ್ರಿಂಕಾ ಎದುರು ಇದುವರೆಗೆ ಆಡಿರುವ 22 ಪಂದ್ಯಗಳಲ್ಲಿ ನಡಾಲ್ ಒಟ್ಟು 19ನೇ ಜಯವನ್ನು ದಾಖಲಿಸಿದರು. ಇದರೊಂದಿಗೆ ಸ್ವಿಸ್ ಆಟಗಾರನೆದುರು ತಮ್ಮ ಪ್ರಭುತ್ವವನ್ನು ಮುಂದುವರಿಸಿದ್ದಾರೆ.

ನಾಳೆ ನಡೆಯಲಿರುವ ಪಂದ್ಯದಲ್ಲಿ ಫ್ರಾನ್ಸ್ನ ಜೊ–ವಿಲ್ಫ್ರೆಡ್ ಸೊಂಗಾ ಎದುರು ನಡಾಲ್ ಕಣಕ್ಕಿಳಿಯಲಿದ್ದಾರೆ. ಸೊಂಗಾ ಜರ್ಮನಿಯ ಜೆ.ಎಲ್. ಸ್ಟ್ರಫ್ ಎದುರು 2–6, 6–4, 7–6 ಅಂತರದಿಂದ ಗೆದ್ದು ಕ್ವಾರ್ಟರ್ ತಲುಪಿದ್ದಾರೆ.

2008ರಲ್ಲಿ ಪ್ಯಾರಿಸ್ ಮಾಸ್ಟರ್ಸ್ ಚಾಂಪಿಯನ್ ಅಗಿದ್ದಸೊಂಗಾ ಎದುರು ನಡಾಲ್ ದಾಖಲೆ ಉತ್ತಮವಾಗಿದೆ. ಇದುವರೆಗೆ 9 ಪಂದ್ಯಗಳಲ್ಲಿ ಗೆಲುವು ಕಂಡು 4 ಬಾರಿ ಸೋಲೊಪ್ಪಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.