ಪ್ಯಾರಿಸ್ (ಎಎಫ್‌ಪಿ):ಪ್ರಮುಖ ನಾಲ್ಕು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಸತತ ಎರಡು ಬಾರಿ ಗೆದ್ದ ವಿಶ್ವದ ಎರಡನೇ ಆಟಗಾರನಾಗುವ ಕನಸು ಕಂಡಿದ್ದ ಜೊಕೊವಿಚ್ ಅವರಿಗೆ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಆಘಾತ ನೀಡಿದರು.

ಶನಿವಾರ ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮ್ಯಾರಥಾನ್ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಆಟಗಾರ ಜೊಕೊವಿಚ್ 2–6, 6–3, 5–7, 7–5, 5–7 ರಿಂದ ಶರಣಾದರು.

ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಥೀಮ್ ಅವರು ಕೆಂಪು ಮಣ್ಣಿನಂಕಣದ ಪರಿಣತ ಆಟಗಾರ ನಡಾಲ್ ಅವರನ್ನು ಎದುರಿಸುವರು. ನಡಾಲ್ ಈಗಾಗಲೇ ದಾಖಲೆ 11 ಬಾರಿ ಇಲ್ಲಿ ಟ್ರೋಫಿ ಗೆದ್ದುಕೊಂಡಿದ್ದಾರೆ.

ಶುಕ್ರವಾರ ಮಳೆಯಿಂದ ಇದೇ ಪಂದ್ಯ ನಿಂತಿತ್ತು. ಈ ವೇಳೆ ಥೀಮ್ 6–2, 3–6, 3–1ರ ಮುನ್ನಡೆಯಲ್ಲಿದ್ದರು. ಶನಿವಾರ ಮುಂದುವರಿದ ಪಂದ್ಯದಲ್ಲಿ ಥೀಮ್ 7–5ರಿಂದಮೂರನೇ ಸೆಟ್ ಗೆದ್ದುಕೊಂಡರು. ಆ ಬಳಿಕ ಜೊಕೊವಿಚ್ 7–5 ರಿಂದ ನಾಲ್ಕನೇ ಸೆಟ್ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯಕ ಸೆಟ್‌ನಲ್ಲಿ ಮಳೆ ಹಾಗೂ ಬಿರುಗಾಳಿಯ ಕಾರಣ ಪಂದ್ಯ ನಿಂತಿತು.

ಮಳೆ ನಿಂತ ಬಳಿಕ ಪಂದ್ಯ ಮುಂದುವರಿಸಲಾಯಿತು. ನಿರ್ಣಾಯಕ ಎನಿಸಿದ್ದ ಐದನೇ ಸೆಟ್ 7–5ರಿಂದ ಥೀಮ್ ಪಾಲಾಯಿತು. ಹಾಗೆಯೇ ಜೊಕೊವಿಚ್ ಪ್ರಶಸ್ತಿ ಓಟಕ್ಕೂ ತಡೆ ಬಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.