ನ್ಯೂಯಾರ್ಕ್ (ರಾಯಿಟರ್ಸ್): ಡಬ್ಲ್ಯುಟಿಎ ಟೂರ್‌ಗಳಲ್ಲಿ ಯುವ ಆಟಗಾರ್ತಿಯರ ಮೇಲೆ ಪುರುಷ ತರಬೇತುದಾರರಿಂದ ಲೈಂಗಿನ ದೌರ್ಜನ್ಯ ನಡೆಯುತ್ತಿದ್ದು, ಇದನ್ನು ತಡೆಯುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಬೆಲಾರಸ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಹೇಳಿದ್ದಾರೆ.

ಫ್ರಾನ್ಸ್‌ನ ಆಟಗಾರ್ತಿ ಫಿಯೊನಾ ಫೆರ್ರೊ, ತಮ್ಮ ಕೋಚ್ ಆಗಿದ್ದ ಪಿಯರ್ ಬೌಟೆಯರ್ 2012–2015ರ ಅವಧಿಯಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಗುರುವಾರ ಆರೋಪಿಸಿದ್ದರು. ಈ ಕುರಿತು ಎಎಫ್‌ಪಿ ವರದಿ ಮಾಡಿತ್ತು. ಇದನ್ನು ಉಲ್ಲೇಖಿಸಿ ಅಜರೆಂಕಾ ಮಾತುಗಳನ್ನಾಡಿದ್ದಾರೆ.

‘ಲೈಂಗಿಕ ದೌರ್ಜನ್ಯ ತಡೆಯುವುದು ನಮ್ಮ ಗುಂಪಿನ ಪ್ರಮುಖ ಆದ್ಯತೆ‘ ಎಂದು ಡಬ್ಲ್ಯುಟಿಎ ಆಟಗಾರ್ತಿಯರ ಕೌನ್ಸಿಲ್ ಸದಸ್ಯೆಯಾಗಿರುವ ಅಜರೆಂಕಾ ಹೇಳಿದ್ದಾರೆ.

‘ಇದು ನಿಜವಾಗಿ ಅತಿ ದುಃಖದ ಸಂಗತಿ. ಇಂತಹ ಘಟನೆಗಳು ನಡೆಯುವ ಹೊತ್ತಲ್ಲಿ, ಒಂದು ವೇಳೆ ನನಗೊಬ್ಬಳು ಮಗಳಿದ್ದು, ಆಕೆ ಟೆನಿಸ್ ಆಡಲು ಬಯಸಿದರೆ ಅದು ನನಗೆ ದೊಡ್ಡ ಕಳವಳದ ಸಂಗತಿಯಾಗುತ್ತದೆ‘ ಎಂದು ಅಜರೆಂಕಾ ನುಡಿದರು.

ದೌರ್ಜನ್ಯವನ್ನು ಬಹಿರಂಗಪಡಿಸುವಲ್ಲಿಪತ್ರಕರ್ತರು ತಮ್ಮ ಪಾತ್ರ ನಿಭಾಯಿಸಬೇಕು ಎಂದು ಅಜರೆಂಕಾ ಮನವಿ ಮಾಡಿದರು. ‘ಜನರು ಈ ಕುರಿತು ಮುಕ್ತವಾಗಿ ಮಾತನಾಡುವಂತೆ ಅವರಿಗೆ ನೆರವಾಗಬೇಕು‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.