ಬೆಂಗಳೂರು: ವಿಧಾನಸಭೆ ಚುನಾವಣೆಗಾಗಿ 10 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಸಮಾಜವಾದಿ ಪಕ್ಷ (ಎಸ್.ಪಿ) ಭಾನುವಾರ ಬಿಡುಗಡೆ ಮಾಡಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಾಬಿನ್ ಮ್ಯಾಥ್ಯೂಸ್, ‘ಪಕ್ಷಕ್ಕೆ ಹೆಚ್ಚಿನ ಜನಬೆಂಬಲವಿರುವ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ. ಈಗ ಘೋಷಣೆ ಮಾಡಿರುವ 10 ಕ್ಷೇತ್ರಗಳಲ್ಲದೆ ಇನ್ನೂ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕೆಲವರು ಉತ್ಸಾಹ ತೋರಿದ್ದಾರೆ’ ಎಂದರು.

‘ಕೋಮುವಾದಿಗಳ ಜತೆ ಯಾವುದೇ ಕಾರಣಕ್ಕೂ ಕೈಜೋಡಿಸುವುದಿಲ್ಲ. ಮೈತ್ರಿಗೆ ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳು ಆಹ್ವಾನ ನೀಡಿವೆ. ಆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ನಿರ್ಧಾರ ಕೈಗೊಳ್ಳುತ್ತಾರೆ’ ಎಂದರು. 2013ರಲ್ಲಿ ಪಕ್ಷದಿಂದ ಸಿ.ಪಿ. ಯೋಗೇಶ್ವರ್ ಜಯ ಗಳಿಸಿದ್ದರು. ಒಂದು ವರ್ಷದ ಬಳಿಕ ಕಾಂಗ್ರೆಸ್ ಸೇರಿದ್ದರು. ಈಗ ಬಿಜೆಪಿ ಸೇರಿದ್ದಾರೆ. ಅವರ ಅವಕಾಶವಾದಿ ರಾಜಕಾರಣವನ್ನು ಪಕ್ಷ ವಿರೋಧಿಸುತ್ತದೆ ಎಂದರು.

ಅಭ್ಯರ್ಥಿಗಳ ಪಟ್ಟಿ

ಚನ್ನಪಟ್ಟಣ–ಶಿಲ್ಪಶ್ರೀ ಗೌಡ, ಮಡಿಕೇರಿ–ಕಿಶನ್ ಉತ್ತಪ್ಪ, ಪಾವಗಡ–ರಮೇಶ್ ನಾಯ್ಕ್, ಮಧುಗಿರಿ–ಎಸ್.ವಿ. ರಾಘವೇಂದ್ರ, ತುರುವೇಕೆರೆ–ಕೃಷ್ಣಪ್ಪ, ಹಿರಿಯೂರು–ಮಂಜಪ್ಪ ಯಾದವ್, ಹೊಳಲ್ಕೆರೆ–ಎಸ್.ಮಿತ್ಯಾ ನಾಯ್ಕ್, ಬಳ್ಳಾರಿ–ಬಿ.ಜುಮರಿ, ಹರಪನಹಳ್ಳಿ–ಚೆನ್ನ ನಾಯ್ಕ್ ಹಾಗೂ ಟಿ.ನರಸೀಪುರ–ಎಂ.ಮಹಾದೇವಸ್ವಾಮಿ ಚಿದರವಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.