ಲಖನೌ: ಅಲಹಾಬಾದ್ನ ಹೆಸರನ್ನು ಪ್ರಯಾಗ್ರಾಜ್ ಎಂದು ಬದಲಾಯಿಸುವ ಪ್ರಸ್ತಾವನೆಗೆ ಉತ್ತರ ಪ್ರದೇಶ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

ಕುಂಭಮೇಳಕ್ಕೂ ಮುನ್ನ ಹೆಸರು ಬದಲಾವಣೆ ಮಾಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಅಲಹಾಬಾದ್ ಇನ್ನು ಮುಂದೆ ಪ್ರಯಾಗ್ರಾಜ್ ಆಗಲಿದೆ ಎಂಬುದನ್ನು ತಿಳಿಸಲು ಸಂತೋಷಪಡುತ್ತೇನೆ ಎಂದು ಹಿರಿಯ ಸಚಿವ ಸಿದ್ಧಾರ್ಥನಾಥ ಸಿಂಗ್ ತಿಳಿಸಿದರು. ಋಗ್ವೇದ, ಮಹಾಭಾರತ ಮತ್ತು ರಾಮಾಯಣದಲ್ಲೂ ಪ್ರಯಾಗ್ರಾಜ್ ಎಂದೇ ಉಲ್ಲೇಖವಾಗಿದೆ ಎಂದೂ ಅವರು ಹೇಳಿದರು.

ಶನಿವಾರ ಅಲಹಾಬಾದ್ಗೆ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್, 2019ರ ಕುಂಭಮೇಳಕ್ಕೂ ಮುನ್ನ ಅಲಹಾಬಾದ್ ಹೆಸರನ್ನು ಪ್ರಯಾಗ್ರಾಜ್ ಎಂದು ಬದಲಾಯಿಸುವುದಾಗಿ ತಿಳಿಸಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ.

ಇದನ್ನೂ ಓದಿ:ಅಲಹಾಬಾದ್ಗೆ ಪ್ರಯಾಗ್ರಾಜ್ ಹೆಸರಿಡಲು ಯೋಗಿ ಚಿಂತನೆ: ಕಾಂಗ್ರೆಸ್ ತೀವ್ರ ವಿರೋಧ

ಆಗಸ್ಟ್ನಲ್ಲಿಮುಘಲ್ಸರೈ ರೈಲು ನಿಲ್ದಾಣದ ಹೆಸರನ್ನು ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಬದಲಾಯಿಸಲಾಗಿತ್ತು.

ಇದನ್ನೂ ಓದಿ:ಮುಘಲ್ಸರೈ ರೈಲು ನಿಲ್ದಾಣ ಈಗ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.