ಶಿರಸಿ: ‘ಅಪ್ಪ ಮುಸಲ್ಮಾನ್, ತಾಯಿ ಕ್ರಿಶ್ಚಿಯನ್, ಮಗ ಬ್ರಾಹ್ಮಣ, ಹೇಗಪ್ಪಾ ಇದು? ಈ ರೀತಿಯ ಹೈಬ್ರಿಡ್ ತಳಿ ಜಗತ್ತಿನ ಯಾವುದೇ ಪ್ರಯೋಗಾಲಯದಲ್ಲಿ ಸಿಗುವುದಿಲ್ಲ. ಇದು ನಮ್ಮ ದೇಶದ ಕಾಂಗ್ರೆಸ್ ಪ್ರಯೋಗಾಲಯದಲ್ಲಿ ಮಾತ್ರ ಸಿಗುತ್ತದೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಟೀಕಿಸಿದ್ದು ಹೀಗೆ.

ತಾಲ್ಲೂಕಿನ ದನಗನಹಳ್ಳಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಹುಲ್ ಗಾಂಧಿ, ರಫೆಲ್ ಅಂದರೆ ಮೂರು ಗಾಲಿ ಸೈಕಲ್ ಅಂದುಕೊಂಡು ಬಿಟ್ಟಿದ್ದಾರೆ. ಅವರಿಗೆ ದೇಶ ಅಂದರೆ ಏನೆಂದು ಗೊತ್ತಿಲ್ಲ, ಧರ್ಮದ ಬಗ್ಗೆ ಪ್ರಜ್ಞೆಯಿಲ್ಲ. ಸುಳ್ಳು ಹೇಳಲೂ ಒಂದು ಮಿತಿಯಿದೆ’ ಎಂದರು.

‘ಇತ್ತೀಚೆಗೆ ದೇಶದಲ್ಲಿ ಚರ್ಚೆಯಾಗುತ್ತಿರುವ ‘ಮಹಾಘಟಬಂಧನ್’, ಅದೊಂದು ಆತ್ಮಹತ್ಯೆ ದಳವಾಗಿದೆ. ಇವರೆಲ್ಲರೂ ಒಟ್ಟಿಗೆ ಸೇರಿ ಮೇ ಅಂತ್ಯದ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ. ಮಹಾಘಟಬಂಧನ್ ಹೆಸರಿನಲ್ಲಿ ಸಾಮೂಹಿಕ ರಾಜಕೀಯ ಆತ್ಮಹತ್ಯೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಆದಷ್ಟು ಬೇಗ ಸಾಂಗವಾಗಿ ನೆರವೇರಲಿ. ಒಟ್ಟಿಗೆ ಸೇರಿಕೊಂಡವರೆಲ್ಲರೂ ಚುನಾವಣೆಯ ನಂತರ ಮನೆಗೆ ಹೋಗುತ್ತಾರೆ. ರಾಹುಲ್ ಗಾಂಧಿ ಬಹುತೇಕ ಕೊಲಂಬಿಯಾಕ್ಕೆ ಹೋಗುತ್ತಾರೆ’ ಎಂದು ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.