ಪಾವಗಡ: ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸೋಮವಾರ ದಲಿತ ಸಮುದಾಯದವರು ಎಂಬ ಕಾರಣಕ್ಕೆ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ಅವರನ್ನು ಹಟ್ಟಿಗೆ ಬಾರದಂತೆ ಗ್ರಾಮಸ್ಥರು ತಡೆದರು.

ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್ಆರ್) ಬಳಸಿ ಹಟ್ಟಿಯಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟು ಮೂಲ ಸೌಕರ್ಯ ಕಲ್ಪಿಸಲು ಸಂಸದ ಎ.ನಾರಾಯಣಸ್ವಾಮಿ ಕಂಪನಿಗಳ ಪ್ರತಿನಿಧಿಗಳನ್ನು ಗ್ರಾಮಕ್ಕೆ ಕರೆ ತಂದಿದ್ದರು.

ವಿಚಾರ ತಿಳಿದ ಗ್ರಾಮಸ್ಥರು ಹಟ್ಟಿಯೊಳಕ್ಕೆ ತಾವು ಬರಬಾರದು, ದಯಮಾಡಿ ಸಹಕರಿಸಿ ಎಂದು ಹಟ್ಟಿಯ ಪ್ರವೇಶ ಮಾಡುವ ಸ್ಥಳದಲ್ಲಿ ಸಂಸದರಿಗೆ ಆಸನದ ವ್ಯವಸ್ಥೆ ಮಾಡಿದರು. ಇತರ ಮುಖಂಡರನ್ನು ಹಟ್ಟಿಯೊಳಕ್ಕೆ ಬರಮಾಡಿಕೊಂಡರು.

ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಹಲವರು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ‘ಇನ್ನೂ ಯಾವ ಕಾಲದಲ್ಲಿದ್ದೀರಿ, ಅವರು ಹಟ್ಟಿಯ ಅಭಿವೃದ್ಧಿಗಾಗಿ ಬಂದಿದ್ದಾರೆ. ಗುಡಿಸಲು ಮುಕ್ತವಾಗಿಸಿ ಹಟ್ಟಿಗೆ ಮೂಲ ಸೌಕರ್ಯ ಕಲ್ಪಿಸಲು ಬಂದಿರುವ ಅವರಿಗೆ ಒಳಗೆ ಬರಲು ಅವಕಾಶ ಮಾಡಿಕೊಡಿ’ ಎಂದರು.

ಎ.ನಾರಾಯಣಸ್ವಾಮಿ ಅವರೂ ಸಹಕರಿಸುವಂತೆ ಕೋರಿದರು. ಆದರೆ, ಇದ್ಯಾವುದಕ್ಕೂ ಮಣಿಯದ ಗ್ರಾಮದ ಕೆಲ ಯುವಕರು, ಮುಖಂಡರು ಪಟ್ಟು ಬಿಡಲಿಲ್ಲ. ಕೊನೆಗೆ ಅಲ್ಲಿಂದ ನಾರಾಯಣಸ್ವಾಮಿ ಹಿಂದಿರುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.