ರಾಯಚೂರು: ಜಿಲ್ಲಾ 1ನೇ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಹಾದೇವಯ್ಯ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಅವರ ವಿರುದ್ಧ ಹೋರಾಟ ನಡೆಸಬೇಕು ಎಂದು ನಕಲ್ಸರ ಹೆಸರಿನಲ್ಲಿ ಕೋರ್ಟ್ ಆವರಣದಲ್ಲಿ ಕರಪತ್ರಗಳನ್ನು ಎಸೆದು ಹೋಗಿರುವುದನ್ನು ವಿರೋಧಿಸಿ ಜಿಲ್ಲಾ ವಕೀಲರ ಸಂಘವು ಮಂಗಳವಾರ ಕೋರ್ಟ್ ಕಲಾಪವನ್ನು ಬಹಿಷ್ಕರಿಸಿತು.

ನ್ಯಾಯಾಧೀಶ ಮಹಾದೇವಯ್ಯ ಅವರು ಎಲ್ಲ ರಾಜಕಾರಣಿಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಕೆಲಸ ಮಾಡಿಕೊಡಲು ಹಣ ಕೇಳುತ್ತಾರೆ. ದೇಶದ ಜನರು ನ್ಯಾಯಾಲಯ ವ್ಯವಸ್ಥೆ ಮೇಲೆ ಮಾತ್ರ ನಂಬಿಕೆ ಇಟ್ಟಿದ್ದಾರೆ. ಆದರೆ ನ್ಯಾಯಾಧೀಶ ಮಹಾದೇವಯ್ಯ ಇದಕ್ಕೆ ಕಳಂಕವಾಗಿದ್ದಾರೆ. ರಾಯಚೂರು ಜನತೆ ಇವರ ವಿರುದ್ಧ ಹೋರಾಟಕ್ಕೆ ಮುನ್ನುಗ್ಗಬೇಕು ಎನ್ನುವ ಬರಹವು ಕರಪತ್ರದಲ್ಲಿದೆ.

ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, 'ನಕ್ಸಲರ ಹೆಸರಿನಲ್ಲಿ ನ್ಯಾಯಾಧೀಶರ ವಿರುದ್ಧ ಕೋರ್ಟ್ ಆವರಣದಲ್ಲಿ ಕರಪತ್ರ ಬಿಸಾಕಿರುವುದು ಗೊತ್ತಾಗಿದೆ. ಈ ಬಗ್ಗೆ ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ಕರಪತ್ರಗಳನ್ನು ಕಳೆದ ಶುಕ್ರವಾರವೇ ಬಿಸಾಡಿ ಹೋಗಿರುವುದು ಗೊತ್ತಾಗಿದೆ. ಶನಿವಾರ ಮತ್ತು ಭಾನುವಾರ ಕೋರ್ಟ್‌ಗೆ ರಜೆ ಇತ್ತು. ಸೋಮವಾರ ನಡೆದ ವಕೀಲರ ಸಂಘದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕೋರ್ಟ್ ಕಲಾಪದಿಂದ ಮಂಗಳವಾರ ದೂರ ಉಳಿಯಲು ತೀರ್ಮಾನಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.