ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ದೆಹಲಿಯ ವಿಶೇಷ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅವರು ಇದೇ 19ರವರೆಗೆ ತಿಹಾರ್ ಜೈಲಿನಲ್ಲಿ ಇರಬೇಕಾಗಿದೆ.

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು.

ಆರೋಪಿಯು ಸಾಕ್ಷ್ಯನಾಶ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂಬುದಕ್ಕೆ ಬೇಕಾದ ಸಮರ್ಥನೆಗಳನ್ನು ಸಿಬಿಐ ನೀಡಿಲ್ಲ. ಹಾಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬಾರದು ಎಂದು ಚಿದಂಬರಂ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರು.

ಆದರೆ, ಈ ವಾದವನ್ನು ವಿಶೇಷ ನ್ಯಾಯಾಧೀಶ ಅಜಯಕುಮಾರ್ ಕುಹರ್ ಮಾನ್ಯ ಮಾಡಲಿಲ್ಲ. ‘ತನಿಖೆ ಮುಂದುವರಿದಿದೆ. ಆರೋಪಿಯು ಹೊಂದಿರುವ ಪ್ರಭಾವದಿಂದಾಗಿ ಅವರು ತನಿಖೆಯ ಹಾದಿ ತಪ್ಪಿಸಬಹುದು ಎಂಬ ಆತಂಕ ಸಿಬಿಐಗೆ ಇದೆ. ಆರೋಪಿಯನ್ನು ಬಿಡುಗಡೆ ಮಾಡಲು ಆಗದು’ ಎಂದು ನ್ಯಾಯಾಧೀಶರು ಹೇಳಿದರು.

ಬೇಡಿಕೆಗೆ ಅಸ್ತು: ಚಿದಂಬರಂ ಅವರು ಜೈಲಿಗೆ ಹೋಗುವುದು ಖಚಿತವಾಗುತ್ತಿದ್ದಂತೆಯೇ ಅವರ ವಕೀಲರು ಜೈಲಿನಲ್ಲಿ ಕೆಲವು ಸೌಲಭ್ಯಗಳನ್ನು ನೀಡಬೇಕು ಎಂದು ಕೋರಿದರು. ಪ್ರತ್ಯೇಕ ಕೊಠಡಿಯಲ್ಲಿ ಅವರನ್ನು ಇರಿಸಬೇಕು. ಸೂಕ್ತ ಭದ್ರತೆ ಒದಗಿಸಬೇಕು. ಔಷಧ
ಗಳು ಮತ್ತು ಕನ್ನಡಕವನ್ನು ಒಯ್ಯಲು ಅವಕಾಶ ನೀಡಬೇಕು. ಪಾಶ್ಚಾತ್ಯಶೈಲಿಯ ಶೌಚಾಲಯ ಒದಗಿಸಬೇಕು ಎಂದು ಈ ಅರ್ಜಿಯಲ್ಲಿ ಕೇಳಲಾಗಿತ್ತು. ಇದಕ್ಕೆ ನ್ಯಾಯಾಲಯವು ಒಪ್ಪಿಗೆ ಸೂಚಿಸಿತು.

ಝಡ್ ಶ್ರೇಣಿಯ ಭದ್ರತೆ ಇರುವವ್ಯಕ್ತಿಯಾದ ಕಾರಣ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು ಎಂದು ಸೂಚಿಸಿತು.

ಪ್ರತ್ಯೇಕ ಕೊಠಡಿ ಬೇಡಿಕೆಗೆ ಅಸ್ತು

ಚಿದಂಬರಂ ಅವರು ಜೈಲಿಗೆ ಹೋಗುವುದು ಖಚಿತವಾಗುತ್ತಿದ್ದಂತೆಯೇ ಅವರ ವಕೀಲರು ಜೈಲಿನಲ್ಲಿ ಕೆಲವು ಸೌಲಭ್ಯಗಳನ್ನು ನೀಡಬೇಕು ಎಂದು ಅರ್ಜಿ ಸಲ್ಲಿಸಿದರು. ಪ್ರತ್ಯೇಕ ಕೊಠಡಿಯಲ್ಲಿ ಅವರನ್ನು ಇರಿಸಬೇಕು. ಸೂಕ್ತ ಭದ್ರತೆ ಒದಗಿಸಬೇಕು. ಅವರ ಔಷಧಗಳು ಮತ್ತು ಕನ್ನಡಕವನ್ನು ಒಯ್ಯಲು ಅವಕಾಶ ನೀಡಬೇಕು. ಪಾಶ್ಚಾತ್ಯ ಶೈಲಿಯ ಶೌಚಾಲಯ ಒದಗಿಸಬೇಕು ಎಂದು ಈ ಅರ್ಜಿಯಲ್ಲಿ ಕೇಳಲಾಗಿತ್ತು. ಇದಕ್ಕೆ ನ್ಯಾಯಾಲಯವು ಒಪ್ಪಿಗೆ ಸೂಚಿಸಿತು.

ಝಡ್ ಶ್ರೇಣಿಯ ಭದ್ರತೆ ಇರುವ ವ್ಯಕ್ತಿಯಾದ ಕಾರಣ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು ಎಂದು ಸೂಚಿಸಿತು.ಜೈಲಿನಲ್ಲಿ ಚಿದಂಬರಂ ಅವರಿಗೆ ಅಗತ್ಯ ಭದ್ರತೆ ಒದಗಿಸಲಾಗುವುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಾಲಯಕ್ಕೆ ತಿಳಿಸಿದರು.

* ಇ.ಡಿ. ದಾಖಲಿಸಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತು. ಇದು ಐಎನ್ಎಕ್ಸ್ ಮೀಡಿಯಾ ಪ್ರಕರಣ

* ಇ.ಡಿ.ಯ ಮುಂದೆ ಶರಣಾಗುವ ಇಂಗಿತಕ್ಕೆ ಸಂಬಂಧಿಸಿ ಇದೇ 12ರಂದು ವಿಚಾರಣೆ ನಡೆಯಲಿದೆ

* ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ 2ಜಿ ವಿಶೇಷ ನ್ಯಾಯಾಲಯವು ಚಿದಂಬರಂ ಮತ್ತು ಅವರ ಮಗ ಕಾರ್ತಿಗೆ ಬಂಧನದಿಂದ ರಕ್ಷಣೆ ನೀಡಿದೆ

* ಚಿದಂಬರಂ ಮಗ ಕಾರ್ತಿ ಅವರು 18 ತಿಂಗಳ ಹಿಂದೆ ಇದೇ ಪ್ರಕರಣದಲ್ಲಿ ಇದೇ ಜೈಲು ಸೇರಿದ್ದರು.

ಇ.ಡಿಯಿಂದ ಶಿವಕುಮಾರ್ ತನಿಖೆ

ಕರ್ನಾಟಕ ಕಾಂಗ್ರೆಸ್ನ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಗುರುವಾರ ತನಿಖೆಗೆ ಒಳಪಡಿಸಿದ್ದಾರೆ. ಇ.ಡಿ.ಗೆ ಪ್ರತ್ಯೇಕವಾದ ಲಾಕ್ಅಪ್ ಸೌಲಭ್ಯ ಇಲ್ಲ. ಹಾಗಾಗಿ, ಶಿವಕುಮಾರ್ ಅವರನ್ನು ಬುಧವಾರ ರಾತ್ರಿ ತುಘಲಕ್ ರೋಡ್ ಪೊಲೀಸ್ ಠಾಣೆಯ ಲಾಕಪ್ನಲ್ಲಿ ಇರಿಸಲಾಗಿತ್ತು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ.ಲಾಕಪ್ನಲ್ಲಿ ಅವರಿಗೆ ಮಂಚ, ಹಾಸಿಗೆ ಮತ್ತು ದಿಂಬು ನೀಡಲಾಗಿತ್ತು. ಬೆಳಗ್ಗಿನ ತಿಂಡಿಯನ್ನು ಅಲ್ಲಿಯೇ ಒದಗಿಸಲಾಗಿತ್ತು. ಜತೆಗೆ, ಇಂಗ್ಲಿಷ್ ಪತ್ರಿಕೆಯನ್ನೂ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.