ಬೆಂಗಳೂರು: ‘ಜೈಶ್ರೀರಾಮ್ ಎಂಬ ಹಿಂಸೆಯು, ಹೇ ರಾಮ್ ಎಂಬ ಅಹಿಂಸೆಯನ್ನು ಭಾರತದಿಂದ ಹೊರಹಾಕಲು ಇಂದು ಟೊಂಕ ಕಟ್ಟಿ ನಿಂತಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಡಿ.ಎಸ್. ನಾಗಭೂಷಣ್ ಅವರ ‘ಗಾಂಧಿ ಕಥನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಾಂಧಿಯನ್ನು ಕೊಂದ ಗೋಡ್ಸೆ ಪ್ರೇತ ವಿದೇಶಕ್ಕೆ ಭೇಟಿ ಕೊಟ್ಟಿತು ಎಂದುಕೊಳ್ಳೋಣ. ತಾನು ಎಲ್ಲಿಂದ ಬಂದೆ ಎಂದು ಹೇಳಬೇಕಾಗಿ ಬಂದರೆ, ತಾನು ಬುದ್ಧನ ನಾಡಿನಿಂದಲೋ, ಗಾಂಧಿ ಅಥವಾ ಅಂಬೇಡ್ಕರ್ ನಾಡಿನಿಂದ ಬಂದೆ ಎಂತಲೋ ಹೇಳಿಕೊಳ್ಳಬೇಕು. ಹೀಗೆ ಹೇಳಿಕೊಳ್ಳದೆ ಬೇರೆ ದಾರಿಯೇ ಇಲ್ಲ’ ಎಂದರು.

‘ವರ್ತಮಾನದಲ್ಲಿ ಕೂಡ ಗೋಡ್ಸೆ ವಿಚಾರಧಾರೆಯ ಸಂತಾನಗಳು ವಿದೇಶಕ್ಕೆ ಹೋದರೆ ಇದೇ ಮಾತು ಹೇಳಬೇಕು. ಇತ್ತೀಚೆಗೆ ತಾನೆ ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿ ತಾವು ಜಗತ್ತಿಗೆ ಬುದ್ಧನನ್ನು ಕೊಟ್ಟಿದ್ದೇವೆ, ಯುದ್ಧವನ್ನಲ್ಲ ಎಂದು ಹೇಳಿದ್ದಾರೆ’ ಎಂದು ನೆನಪು ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.