ಶಿವಮೊಗ್ಗ: ಮೂರು ದಶಕಗಳ ಹಿಂದೆ ಆರಂಭವಾದ ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾಷೆ, ಸಾಹಿತ್ಯದ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಲು ‘ಕನ್ನಡ ಭಾರತಿ’ ಹೆಸರಿನಲ್ಲಿ ಅಧ್ಯಯನ ಕೇಂದ್ರ ತೆರೆದಿತ್ತು. ಈ ಅಧ್ಯಯನ ಕೇಂದ್ರ ಅಂದು ಹೇಗಿತ್ತೋ ಇಂದಿಗೂ ಹಾಗೆ ಇದೆ. ಬದಲಾವಣೆ ಎಂದರೆ ಅಂದು ನಿರ್ದೇಶಕರೂ ಸೇರಿ ಒಂಬತ್ತು ಪ್ರಾಧ್ಯಾಪಕರು ಇದ್ದರು. ಇಂದು ಆ ಸಂಖ್ಯೆ ನಾಲ್ಕಕ್ಕೆ ಕುಸಿದಿದೆ.

ಆರಂಭದಲ್ಲಿ ನಾಲ್ಕು ಐಚ್ಚಿಕ ವಿಷಯಗ ಳನ್ನು ಪರಿಚಯಿಸಲಾಗಿತ್ತು. ಇಂದು ಜಾನ ಪದ, ಆಧುನಿಕ ಕನ್ನಡ ಸಾಹಿತ್ಯಕಷ್ಟೇ ಸೀಮಿತವಾಗಿದೆ. ತೌಲನಿಕ ಅಧ್ಯಯನ, ವಿಮರ್ಶಾ ಪ್ರಕಾರಗಳಿಗೆ ತಿಲಾಂಜಲಿ ನೀಡಲಾಗಿದೆ. ವಿಸ್ತರಣಾ ಕಾರ್ಯಕ್ರಮಗಳು, ಕ್ಷೇತ್ರ ಕಾರ್ಯ, ಹೊರಗಿನ ಸಂಶೋಧನೆಗಳು ಇಲ್ಲವಾಗಿವೆ. ವಿಶ್ವವಿದ್ಯಾಲ ಯದಲ್ಲಿ ಕನ್ನಡಕ್ಕೆ ಮೇರು ಸ್ಥಾನ ಇರಬೇಕು ಎಂಬ ಕಾರಣಕ್ಕೆ ಪ್ರವೇಶ ದ್ವಾರದ ಬಳಿಯೇ ಕಲಾತ್ಮಕ ಕಟ್ಟಡ ನಿರ್ಮಿಸಲು ಕೆಲವು ವರ್ಷಗಳ ಹಿಂದೆ ನಿರ್ಧರಿಸಲಾಗಿತ್ತು. ಸರ್ಕಾರವೂ ಅನು ಮತಿ ನೀಡಿತ್ತು. ಆದರೆ, ಪ್ರತ್ಯೇಕ ಅನುದಾನ ನೀಡಲಿಲ್ಲ ಎಂಬ ಕಾರಣಕ್ಕೆ ಇದುವರೆಗೂ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತ ನಂತರ ಕುವೆಂಪು ಕನ್ನಡ ಭಾರತಿಗೆ ₹ 1 ಕೋಟಿ ಅನುದಾನ ನೀಡಲಾಗಿತ್ತು. ಅಂದು ನಿರ್ದೇಶಕರಾಗಿದ್ದ ಡಾ.ಕುಮಾರಚಲ್ಯ ಅವರ ನೇತೃತ್ವದಲ್ಲಿ ಕುವೆಂಪು ಬರಹಗಳ 8 ಬೃಹತ್ ಸಂಪುಟಗಳನ್ನು ಹೊರ ತರಲಾಗಿತ್ತು. ಅದಕ್ಕೂ ಮೊದಲು ಯುಜಿಸಿ ವಿಶೇಷ ಕಾರ್ಯಕ್ರಮದ ಅಡಿಯಲ್ಲೂ ಒಂದಷ್ಟು ಸಾಹಿತ್ಯದ ಕೆಲಸಗಳಾಗಿದ್ದವು. ಒಂದು ದಶಕದಿಂದ ಈಚೆಗೆ ಮತ್ತೆ ಎಲ್ಲ ಕೆಲಸಗಳೂ ನನೆಗುದಿಗೆ ಬಿದ್ದಿವೆ.

‘ಕನ್ನಡ ಭಾಷೆ, ಸಾಹಿತ್ಯದ ಅಭಿವೃದ್ಧಿಗೆ ಮಾಡಬೇಕಾದ ಸಾಕಷ್ಟು ಕೆಲಸಗಳಿವೆ. ಪ್ರತಿ ವರ್ಷ ₹ 1 ಕೋಟಿ ಅನುದಾನ ನೀಡಬೇಕು. ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಪ್ರತಿಭಾ ವಂತ ಪ್ರಾಧ್ಯಾಕರ ನೇಮಕ ಮಾಡಬೇಕು’ ಎನ್ನುತ್ತಾರೆ ಕನ್ನಡ ಭಾರತಿ ನಿವೃತ್ತ ನಿರ್ದೇಶಕ ಡಾ.ಕುಮಾರಚಲ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.