ಬೆಂಗಳೂರು:ಮೊನಚು ಹಾಸ್ಯ, ವಿಡಂಬನೆ ಮೂಲಕಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳು ನಾಡಿನ ಜನರ ಮನ ಗೆದ್ದಿವೆ.

ಸಮಕಾಲೀನ ಸಮಸ್ಯೆಗಳು, ಸರ್ಕಾರಗಳ ದುರಾಡಳಿತವನ್ನು ಹಾಸ್ಯದ ಮೂಲಕ ಜನರ ಮುಂದಿಡುವ ಪ್ರಯತ್ನವನ್ನು ಹಿರಣ್ಣಯ್ಯ ಮಾಡಿದ್ದರು. ಹಾಸ್ಯದ ಮಾತುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದ್ದರು. 70 ರಿಂದ 90ರ ದಶಕದಲ್ಲಿ ಹಿರಣ್ಣಯ್ಯ ಅವರ ನಾಟಕಗಳು ರಾಜ್ಯದಲ್ಲಿ ಸಾಕಷ್ಟು ಪ್ರಸಿದ್ಧಿಯಾಗಿದ್ದವು.

ಜನಪ್ರಿಯ ನಾಟಕಗಳು:‘ಮಕ್ಮಲ್ ಟೋಪಿ’, ‘ಕಪಿಮುಷ್ಟಿ’, ‘ದೇವದಾಸಿ’, ‘ನಡುಬೀದಿನಾರಾಯಣ’, ‘ಲಂಚಾವತಾರ’, ‘ಪಶ್ಚಾತ್ತಾಪ’, ‘ಭ್ರಷ್ಟಾಚಾರ’, ‘ಚಪಲಾವತಾರ’, ‘ಡಬ್ಬಲ್ ತಾಳಿ’, ‘ಲಾಟರಿ ಸರ್ಕಾರ’, ‘ಸನ್ಯಾಸಿ ಸಂಸಾರ’, ‘ಸದಾರಮೆ’, ‘ಎಚ್ಚಮ ನಾಯಕ’ ಈ ನಾಟಕಗಳು ಈಗಲೂ ನಾಡಿನ ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿವೆ.

ಲಂಚಾವತಾರ:ಲಂಚಾವತಾರ ನಾಟಕ 1959ರ ಡಿಸೆಂಬರ್ 30 ರಂದು ಶಿವಮೊಗ್ಗದಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಈ ನಾಟಕದಲ್ಲಿ ಹಿರಣ್ಣಯ್ಯ ಅವರು ’ಗುಮಾಸ್ತ’ ಪಾತ್ರವನ್ನು ಮಾಡಿದ್ದಾರೆ.

ಮಕ್ಮಲ್ ಟೋಪಿ: ಈ ನಾಟಕದಲ್ಲಿ ಹಿರಣ್ಣಯ್ಯ ಅವರು ನಾಣಿಯ ಪಾತ್ರವನ್ನು ಮಾಡಿದ್ದಾರೆ. ವಿಭಿನ್ನ ಸಂಭಾಷಣೆಗಳ ಮೂಲಕ ಹಿರಣ್ಣಯ್ಯ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ.

ಪಶ್ಚಾತ್ತಾಪ: ಕೌಟುಂಬಿಕ ಹಾಸ್ಯಮಯ ನಾಟಕಪಶ್ಚಾತ್ತಾಪ. ಒಂದು ಕುಟುಂಬದಲ್ಲಿ ನಡೆಯುವ ಸಣ್ಣ ಸಣ್ಣ ಘಟನೆಗಳನ್ನು ಹಾಸ್ಯಮಯವಾಗಿ ತೋರಿಸಲಾಗಿದೆ.

ಭ್ರಷ್ಟಾಚಾರ: ಸರ್ಕಾರಿ ಕಚೇರಿಗಳು ಹಾಗೂ ಇಲಾಖೆಗಳಲ್ಲಿ ನಡೆಯುವ ಭ್ರಷ್ಟಾಚಾರದ ಮೇಲೆ ಬೆಳಕು ಚೆಲ್ಲುವ ನಾಟಕವಾಗಿದೆ. ಇದರಲ್ಲಿ ಹಿರಣ್ಣಯ್ಯ ಪೊಲೀಸ್ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ನಡುಬೀದಿ ನಾರಾಯಣ:ನಡುಬೀದಿ ನಾರಾಯಣ ಕೂಡ ಸಾಮಾಜಿಕ ನಾಟಕ ಮಧ್ಯಮವರ್ಗದ ಕಥಾವಸ್ತುವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.