ಮೈಸೂರು: ಸಾಹಿತಿ ಎಸ್.ಎಲ್.ಭೈರಪ್ಪ ರಚಿಸಿರುವ ಕೃತಿಗಳ ಮೇಲೆ ಸಮಗ್ರವಾಗಿ ಬೆಳಕು ಚೆಲ್ಲುವ ‘ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ’ವನ್ನು ಜ. 19ರಿಂದ ಎರಡು ದಿನ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.

ಭೈರಪ್ಪ ಅವರ ಸಾಹಿತ್ಯದ ಕುರಿತು ಇದೇ ಮೊದಲ ಬಾರಿ ಒಂದೇ ಸೂರಿನಡಿ ಭಾಷಣ, ಸಂವಾದ, ಸಂದರ್ಶನ, ಗಾಯನ, ನಾಟಕ ನಡೆಯಲಿದೆ. ‘ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ’ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಿವಿಧ ವಲಯಗಳ ವಿದ್ವಾಂಸರು, ಸಾಹಿತಿಗಳು ತಮ್ಮ ವಿಚಾರಧಾರೆ ಹರಿಸಲಿದ್ದಾರೆ.

ಬೆಳಿಗ್ಗೆ 9.30ಕ್ಕೆ ಸಾಹಿತಿ ಚಂದ್ರಶೇಖರ ಕಂಬಾರ ಸಾಹಿತ್ಯೋತ್ಸವ ಉದ್ಘಾಟಿಸಲಿದ್ದಾರೆ. ಸಾಹಿತಿ ಶತಾವಧಾನಿ ಆರ್.ಗಣೇಶ್, ಲೇಖಕಿ ಶೆಫಾಲಿ ವೈದ್ಯ ಭಾಷಣ ಮಾಡುವರು. ಭೈರಪ್ಪ ಜೊತೆಗಿನ ಸಂದರ್ಶನಗಳ ಸಂಕಲನ ‘ಚಿಂತನ– ಮಂಥನ’ವನ್ನು ಲೇಖಕ ಪ್ರಧಾನ ಗುರುದತ್ತ ಬಿಡುಗಡೆ ಮಾಡುವರು.

ಮಧ್ಯಾಹ್ನ 2.30ಕ್ಕೆ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಲೇಖಕ ಕೃಷ್ಣೇಗೌಡ ಭಾಷಣ ಮಾಡಲಿದ್ದಾರೆ. ಬಳಿಕ ಭೈರಪ್ಪ ಅವರನ್ನು ಶೆಫಾಲಿ ಸಂದರ್ಶಿಸಲಿದ್ದಾರೆ.

ಜ. 20ರಂದು ಬೆಳಿಗ್ಗೆ 10ಕ್ಕೆ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಮತ್ತು ಲೇಖಕ ನಂದಕಿಶೋರ್ ಆಚಾರ್ಯ ಭಾಷಣ ಮಾಡುವರು. ಬಳಿಕ ಸಾಹಿತ್ಯಾಸಕ್ತರನ್ನು ಉದ್ದೇಶಿಸಿ ಭೈರಪ್ಪ ಮಾತನಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.