ಬೆಂಗಳೂರು: 12ನೇ ಶತಮಾನದಲ್ಲಿ ಚಾಲ್ತಿಯಲ್ಲಿದ್ದ ಶರಣರ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಪುನರ್ ಸ್ಥಾಪಿಸಲು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ‘ಮತ್ತೆ ಕಲ್ಯಾಣ’ ಚಳವಳಿ ಆಗಸ್ಟ್ 1ರಿಂದ ಆರಂಭವಾಗಲಿದ್ದು, ಈ ಸಂಬಂಧ ರೂಪುರೇಷೆ ಸಿದ್ಧಪಡಿಸಲು ಸ್ವತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅಧ್ಯಕ್ಷತೆಯಲ್ಲಿ ಪ್ರಗತಿಪರ ಚಿಂತಕರು ಮತ್ತು ಸಂಘಟಕರ ರಾಜ್ಯ ಮಟ್ಟದ ಸಭೆ ನಗರದಲ್ಲಿ ಭಾನುವಾರ ನಡೆಯಿತು.

ವೀರಮಾತೆ ಅಕ್ಕನಾಗಮ್ಮನ ಐಕ್ಯ ಸ್ಥಳವಾದ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಿಂದ ಆರಂಭವಾಗುವ ಆಂದೋಲನ, ಆಗಸ್ಟ್ 29ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮುಕ್ತಾಯವಾಗಲಿದೆ.ಕಾಯಕ ಚಳವಳಿಯ ಮಹತ್ವ, ಬಸವಣ್ಣ ಮತ್ತು ಇತರ ಶರಣರ ವಚನಗಳನ್ನು ಯುವ ಜನರಿಗೆ ತಲುಪಿಸುವ ಉದ್ದೇಶದಿಂದ ಒಂದು ತಿಂಗಳ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ ಎಂದು ಸಾಣೇಹಳ್ಳಿ ಸ್ವಾಮೀಜಿ ಹೇಳಿದರು.

‘ಮೂಲಭೂತವಾದಿಗಳು ನಮ್ಮ ವಿದ್ಯಾರ್ಥಿ ಹಾಗೂ ಯುವ ಜನರಿಂದ ವಿಕೃತ ಕೆಲಸಗಳನ್ನು ಮಾಡಿಸುವ ಮೂಲಕ ಅಟ್ಟಹಾಸ ಮೆರೆಯುತ್ತಿದ್ದಾರೆ. ಗಾಂಧೀಜಿ ಅವರನ್ನು ಕೊಂದ ಗೋಡ್ಸೆಯನ್ನೂ ಬೆಂಬಲಿಸುವವರ ಸಂಖ್ಯೆ ಹೆಚ್ಚುತ್ತಿದೆ.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾನವೀಯತೆ, ವೈಚಾರಿಕತೆ, ಸಮಾನತೆ ಕುರಿತು ಸಂವಾದ ನಡೆಸಿ ಸಮಾಜಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ.ಪರ್ಯಾಯರಾಜಕೀಯದ ಉದ್ದೇಶ ಈ ಅಭಿಯಾನದಲ್ಲಿ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘40 ವರ್ಷಗಳಿಂದ ಒಂದೇ ರೀತಿಯ ಮಾತುಗಳನ್ನು ಕೇಳುತ್ತಿದ್ದೇವೆ. ಹೀಗಾಗಿ ಪರಿಣಾಮಕಾರಿ ಬದಲಾವಣೆ ಸಾಧ್ಯವಾಗಿಲ್ಲ. ಹೊಸ ತಲೆಮಾರಿಗೆ ಚಳವಳಿಯ ನೇತೃತ್ವ ನೀಡುವ ಅಗತ್ಯವಿದೆ. ಸಿದ್ಧಾಂತಗಳ ಮಡಿವಂತಿಕೆ ಬಿಟ್ಟು ಎಲ್ಲರನ್ನೂ ಒಳಗೊಳ್ಳಬೇಕು’ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಹೇಳಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ, ಸಾಹಿತಿ ಚಂದ್ರಶೇಖರ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ, ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ, ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್, ಪ್ರಗತಿಪರ ಚಿಂತಕರಾದ ಸಿ.ಎಸ್. ದ್ವಾರಕನಾಥ್, ಇಂದೂಧರ ಹೊನ್ನಾಪುರ, ರಂಜಾನ್ ದರ್ಗಾ, ಅಗ್ನಿ ಶ್ರೀಧರ್, ಬಿ.ಟಿ. ಲಲಿತಾ ನಾಯಕ್, ಜಿ.ಎನ್. ನಾಗರಾಜ್, ಶ್ರೀಪಾದ ಭಟ್, ಮಾವಳ್ಳಿ ಶಂಕರ್, ಲೀಲಾ ಸಂಪಿಗೆ, ಯೋಗೇಶ್ ಮಾಸ್ಟರ್, ಬಿ. ಜಯಶ್ರೀ, ಸಿ. ವೀರಣ್ಣ, ಡಾ. ವಾಸು, ಮಲ್ಲಿಗೆ ಸೇರಿದಂತೆ ಹಲವರು ‘ಮತ್ತೆ ಕಲ್ಯಾಣ’ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.