ಬೆಂಗಳೂರು: ಗೋವು ಸಾಕಾಣಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿದ್ದು, ಮತ್ತೊಂದೆಡೆ ಅವರ ಮೇಲೆ ಗದಾಪ್ರಹಾರ ನಡೆಸಲು ಮುಂದಾಗಿದ್ದಾರೆ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಡಿ (ಆರ್‌ಸಿಇಪಿ) ನಡೆಯಲಿರುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಲು ಮೋದಿ ಮುಂದಾಗಿದ್ದು, ರೈತರನ್ನು ನಿರ್ನಾಮ ಮಾಡುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.ಒಂದು ವೇಳೆ ಸಹಿಗೆ ಮುಂದಾದರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದುಎಂದುಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರಎಚ್ಚರಿಸಿದರು.

ಡೇರಿ, ಕೃಷಿ ಉತ್ಪನ್ನಗಳನ್ನು ವಿದೇಶಗಳಿಂದ ಆಮದು ಮಾಡಿ ಕೊಳ್ಳುವ ಅಗತ್ಯವಿಲ್ಲ. ಆಮದುಪ್ರಮಾಣ ಹೆಚ್ಚಾದರೆ ದೇಶಿ ಉತ್ಪನ್ನಗಳ ಬೆಲೆ ಕುಸಿದು, ರೈತರು ಬೀದಿಗೆ ಬರಬೇಕಾಗುತ್ತದೆ. ರೇಷ್ಮೆ ಬೆಳೆಯುವ ರೈತರಿಗೆ ಬಂದ ಸ್ಥಿತಿ ಇತರರಿಗೂ ಬರಲಿದೆ. ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಆರ್ಥಿಕ ತಜ್ಞರು, ಗ್ರಾಮೀಣ ಆರ್ಥಿಕ ಪರಿಣಿತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದರು.

ದೇಶದಲ್ಲಿ 10 ಕೋಟಿ, ರಾಜ್ಯದಲ್ಲಿ 1.50 ಕೋಟಿ ಜನರು ಹೈನುಗಾರಿಕೆಯಲ್ಲಿತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರತಿನಿತ್ಯ 78 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದೆ. ಒಪ್ಪಂದದ ನಂತರ ಕಡಿಮೆ ಬೆಲೆಗೆ ಡೇರಿ ಉತ್ಪನ್ನಗಳು ಆಮದಾಗಲಿದ್ದು, ನಮ್ಮಲ್ಲಿ ರೈತರು
ಬೀದಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.