ಬೆಂಗಳೂರು: ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಮತ್ತು ಉಪಚುನಾವಣೆಗಳ ಕಾರ್ಯತಂತ್ರದ ಬಗ್ಗೆ ಇಂದು ಸಂಜೆ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ಉಪ ಚುನಾವಣೆ ಉಸ್ತುವಾರಿಗಾಗಿ ಎಲ್ಲ 17 ಕ್ಷೇತ್ರಗಳಿಗೆ ಒಬ್ಬೊಬ್ಬ ಸಚಿವರನ್ನು ನಿಯೋಜಿಸಲಾಗುವುದು. ನಾವು ಗೆಲ್ಲುವುದು ನೂರಕ್ಕೆ ನೂರೊಂದರಷ್ಟು ಖಚಿತ. ಈ ಬಗ್ಗೆ ಬಿಜೆಪಿಗೆ ಅನುಮಾನವೇ ಇಲ್ಲ’ ಎಂದು ಯಡಿಯೂರಪ್ಪ ಆತ್ಮವಿಶ್ವಾಸ ಪ್ರದರ್ಶಿಸಿದರು.

ಇದನ್ನು ಓದಿ:ರಮೇಶ್ ಕುಮಾರ್ ಪ್ರತಿಕ್ರಿಯೆ | ಅನರ್ಹ ಅನ್ನಿಸಿಕೊಳ್ಳೋದು ಗೌರವ ಅಲ್ಲ

‘ಸುಪ್ರೀಂಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಬೇರೆಬೇರೆ ಕಡೆ ಇರುವ ಅನರ್ಹ ಶಾಸಕರು ಸಂಜೆಯ ಹೊತ್ತಿಗೆ ನಗರಕ್ಕೆ ಹಿಂದಿರುಗುವ ನಿರೀಕ್ಷೆ ಇದೆ. ಅವರೆಲ್ಲರ ಜೊತೆಗೆ ಸಮಾಲೋಚನೆ ನಡೆಸಿ, ಮುಂದಿನ ನಡೆಯನ್ನು ಪ್ರಕಟಿಸಲಾಗುವುದು’ ಎಂದು ಹೇಳಿದರು.

ಶರತ್ ಬಚ್ಚೇಗೌಡ ಸೇರಿದಂತೆ ಉಪಚುನಾವಣೆಯಲ್ಲಿ ಬಂಡಾಯದ ದನಿ ಮೊಳಗಿಸಿರುವ ನಾಯಕರು ಕುರಿತು ಪ್ರತಿಕ್ರಿಯಿಸಿದ ಅವರು, ‘ನಮ್ಮ ಜೊತೆಯಲ್ಲಿರುವವರ ಬಗ್ಗೆ ಮಾತ್ರ ನಾನು ಏನಾದರೂ ಹೇಳುತ್ತೇನೆ. ಉಳಿದವರ ವಿಷಯ ನನಗೆ ಬೇಡ’ ಎಂದರು.

ಇದನ್ನೂ ಓದಿ:ಅನರ್ಹರಿಗೆ ನೆಮ್ಮದಿ ಕೊಟ್ಟ ತೀರ್ಪು: ಸ್ಪೀಕರ್ ನಿರ್ಧಾರಕ್ಕೂ ಮಾನ್ಯತೆ

ಮುಂಬರುವ ಉಪಚುನಾವಣೆಗಳಲ್ಲಿ ಕನಿಷ್ಠ ಏಳೆಂಟು ಸ್ಥಾನಗಳಲ್ಲಿಯಾದರೂ ಬಿಜೆಪಿ ಜಯಗಳಿಸಲೇ ಬೇಕಿದೆ. ಅನರ್ಹ ಶಾಸಕರಚುನಾವಣೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಸುಪ್ರೀಂಕೋರ್ಟ್ ತೀರ್ಮಾನ ಬಿಜೆಪಿಗೆ ವರದಾನವೆಂದೇವಿಶ್ಲೇಷಿಸಲಾಗುತ್ತಿದೆ. ಅವರಿಗೆ ಟಿಕೆಟ್ ಕೊಡಲು ಪಕ್ಷದ ರಾಜ್ಯ ನಾಯಕರುತೀರ್ಮಾನಿಸಿದರೆ ಸ್ಥಳೀಯವಾಗಿ ಅವರನ್ನು ವಿರೋಧಿಸಿಕೊಂಡು ರಾಜಕಾರಣ ಮಾಡುತ್ತಿದ್ದ ಸ್ಥಳೀಯ ನಾಯಕರ ಬಂಡಾಯದ ಬೇಗೆ ಎದುರಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.