ಇಂದು ಅಜ್ಜ–ಅಜ್ಜಿಯರ ದಿನ: ಇದರ ಹಿನ್ನೆಲೆ ಹಾಗೂ ಮಹತ್ವ ಏನು?
ಅಜ್ಜ–ಅಜ್ಜಿ ಎಂದರೆ ಮಕ್ಕಳಿಗೆ ಬಲು ಪ್ರೀತಿ. ಅನೇಕ ಮಕ್ಕಳು ತಮ್ಮ ತಂದೆ ತಾಯಿಗಿಂತ ತಮ್ಮ ಅಜ್ಜ–ಅಜ್ಜಿಯರನ್ನೇ ಹೆಚ್ಚು ಹಚ್ಚಿಕೊಂಡಿರುತ್ತವೆ. ಇಂತಹ ಅಜ್ಜ–ಅಜ್ಜಿಯರನ್ನು ಪ್ರತಿದಿನ ನೆನೆಯುವುದು ನಮ್ಮ ಕರ್ತವ್ಯವಾದರೂ ಜಗತ್ತು ಅವರಿಗಾಗಿಯೇ ಒಂದು ದಿನವನ್ನು ಮೀಸಲಿಟ್ಟಿದೆ. ಅದೇ ಇಂದು (ಸೆ.12) ವಿಶ್ವ ಅಜ್ಜ–ಅಜ್ಜಿಯರ ದಿನ. ಪ್ರತಿ ವರ್ಷ ಸೆಪ್ಟೆಂಬರ್ ಎರಡನೇ ಭಾನುವಾರವನ್ನು ಅಜ್ಜ–ಅಜ್ಜಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ವಿಶೇಷವಾಗಿ ಅಜ್ಜ–ಅಜ್ಜಿಯರ ಜೊತೆ ಕಾಲ ಕಳೆಯಲು ಆಚರಿಸಲಾಗುತ್ತಿದೆ. ಮೊಮ್ಮಕ್ಕಳು ತಮ್ಮ ಅಜ್ಜ–ಅಜ್ಜಿಯರಿಗೆ ಈ ದಿನ ವಿಶೇಷ ಉಡುಗೊರೆ ಕೊಟ್ಟು ಸನ್ಮಾನಿಸುವುದುಂಟು. ಅವರೊಟ್ಟಿಗೆ ಎಲ್ಲಾದರೂ ಪ್ರವಾಸ, ಹೋಟೆಲ್ ಹೋಗುವ ಮೂಲಕ ಸಂತಸದ ಕ್ಷಣಗಳನ್ನು ಈ ದಿನ ಹಂಚಿಕೊಳ್ಳುತ್ತಾರೆ.Last Updated 12 ಸೆಪ್ಟೆಂಬರ್ 2021, 7:17 IST