ಗುಜರಾತ್ ಅಖಾಡದಲ್ಲೊಂದು ಸುತ್ತು | ಪಾಟೀದಾರರ ಓಲೈಕೆಗೆ ‘ಖಾಪ್’ ಸಮೀಕರಣದ ಮೊರೆ
ಗಾಂಧಿನಗರ (ಗುಜರಾತ್): ಗುಜರಾತ್ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ‘ಕ್ಷತ್ರಿಯ–ದಲಿತ (ಹರಿಜನ)–ಆದಿವಾಸಿ–ಪಾಟೀದಾರ್ (ಪಟೇಲರು)’ ಸಮುದಾಯಗಳನ್ನೊಳಗೊಂಡ ‘ಖಾಪ್’ ಸೂತ್ರದ ಮೊರೆ ಹೋಗಿದ್ದು, ಈ ಜಾತಿ ಸಮೀಕರಣ ದಿಂದ ಭರಪೂರ ರಾಜಕೀಯ ಲಾಭ ಪಡೆಯುವ ಹವಣಿಕೆಯಲ್ಲಿವೆ.
ಕಾಂಗ್ರೆಸ್‌ನ ಮಾಧವಸಿನ್ಹ ಸೋಲಂಕಿ ಅವರು 1980 ಹಾಗೂ 1985ರ ಚುನಾವಣೆಗಳಲ್ಲಿ‘ಖಾಮ್ (ಕ್ಷತ್ರಿಯ–ದಲಿತ (ಹರಿಜನ)–ಆದಿವಾಸಿ–ಮುಸ್ಲಿಂ) ಕೂಟ ಕಟ್ಟಿ ಪಕ್ಷವು 142 ಹಾಗೂ 149 ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮಾಡಿದ್ದರು. ಬಿಜೆಪಿ ಈ ಸಲ ಸೋಲಂಕಿ ಅವರ ಸೂತ್ರವನ್ನು ಸ್ವಲ್ಪ ಪರಿಷ್ಕರಿಸಿದೆ. ಮುಸ್ಲಿಮರ ಬದಲು ಪಾಟೀದಾರರನ್ನು ಈ ಗುಂಪಿಗೆ ಸೇರಿಸಿಕೊಂಡಿದೆ.Last Updated 30 ನವೆಂಬರ್ 2022, 19:30 IST