ಅವರೇನಂತಾರೋ, ಇವರೇನಂತಾರೋ?: ಟೀಕೆ-ವ್ಯಂಗ್ಯಗಳಿಗೆ ಹೆದರಿ ಬದುಕುವವರಿಗಾಗಿ ಈ ಲೇಖನ
‘ನಾವು ಯಾರ ಮಾತಿಗೂ ತಲೆಕೆಡಿಸಿಕೊಳ್ಳದ ಧೀರರು’ ಅಂತ ನೀವು ಭುಜ ಕೊಡವಿ ಮುಂದೆ ಸಾಗಬಹುದು. ಆದರೆ ಬಹುಜನರಿಗೆ ಇದು ಸಾಧ್ಯವಾಗದ ಮಾತು. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ‘ಇತರರು ಏನೆನ್ನುತ್ತಾರೋ’ ಎಂದು ಹೆದರಿ, ತಮಗೆ ಬೇಕೆನಿಸಿದರೂ ಅಂತಹ ಸಂಗತಿಗಳಿಂದ ದೂರವಿರುವುದು, ಇತರರ ಟೀಕೆಯನ್ನು ಮನಸ್ಸಿನಲ್ಲಿರಿಸಿಕೊಂಡು ಬಹುಕಾಲ ಅದರ ಬಗ್ಗೆಯೇ ‘ಚಿಂತನ-ಮಂಥನ’ ನಡೆಸುವುದು ಸಾಮಾನ್ಯ. ಆಡುಮಾತಿನಲ್ಲಿ ನಿತ್ಯ ಎದುರಿಸುವ ಟೀಕೆ-ವ್ಯಂಗ್ಯ-ಚುಚ್ಚುಮಾತುಗಳೂ ಇದೇ ವಿಷಯಕ್ಕೆ ಸಂಬಂಧಿಸಿವೆ. ಔಪಚಾರಿಕವಾಗಿ ಕಚೇರಿಗಳಲ್ಲಿ ನಡೆಯುವ ‘ಫೀಡ್‌ಬ್ಯಾಕ್’ ಎಂಬ ‘ಪ್ರತಿಕ್ರಿಯೆ’- ಪ್ರಕ್ರಿಯೆಗಳು ಇದರ ಮತ್ತೊಂದು ಆರೋಗ್ಯಕರ ರೂಪವೆನ್ನಬಹುದು.Last Updated 6 ಮಾರ್ಚ್ 2023, 19:30 IST