ಪುಸ್ತಕ ಪರಿಚಯ | ಅಣು - ಕಾಮಾಟಿಪುರ, ಧಾರಾವಿ ತೆರೆದಿಡುವ ವಾಸ್ತವ
‘ನನ್ನ ಕಥೆ ಇಲ್ಲಿನ ಬಹುತೇಕ ಎಪ್ಪತ್ತೆಂಬತ್ತು ಪರ್ಸೆಂಟ್ ಹೆಂಗಸರ ಕಥೆಯೇ ಆಗಿದೆ. ಹೊಟ್ಟೆ ಬಟ್ಟೆಗಾಗಿ ಸದಾ ಹೊಡೆದಾಡುವ ಹಸಿವಿನ ಸಾಮ್ರಾಜ್ಯದ ಕಥೆ ಇದಾಗಿದೆ’ ಎಂದು ಕಥಾನಾಯಕಿ ಲಕುಮಿಬಾಯಿ ನಕ್ಕಾಗ, ‘ಹೌದು, ಅದು ಪ್ರಪಂಚದ ಎಲ್ಲ ಜೀವಿಗಳ ಕಥೆಯೂ ಹೌದು. ಆದರೆ, ಅವುಗಳನ್ನು ದಕ್ಕಿಸಿಕೊಳ್ಳುವ ಮಾರ್ಗಗಳು, ತಂತ್ರಗಳು ತುಂಬಾ ಭಿನ್ನ ಭಿನ್ನವಾಗಿವೆ’ ಎಂದು ಕಥೆಗಾರ ಉತ್ತರಿಸುತ್ತಾನೆ. ಕಾದಂಬರಿಯ ಆರಂಭದಲ್ಲೇ ಬರುವ ಈ ಮಾತುಕತೆ ‘ಅಣು’ವಿನ ಜೀವಾಳ ಎನ್ನಬಹುದು.Last Updated 4 ಜೂನ್ 2022, 20:30 IST