ಟ್ರೂ ಕಾಲರ್‌ನಲ್ಲಿ ಹೆಸರು ಬದಲಿಸಿ..
ಟ್ರೂ ಕಾಲರ್ ಡೌನ್‍ಲೋಡ್ ಮಾಡಿಕೊಂಡಾಗ ಅಲ್ಲಿ ನಮ್ಮ ಫೋನ್ ಸಂಖ್ಯೆಯನ್ನು ಋಜುವಾತು (verify) ಮಾಡಲಾಗುತ್ತದೆ. ಅಲ್ಲಿ ನಮ್ಮ ಫೋನ್ ಸಂಖ್ಯೆ ನೀಡಿದಾಗ ನಮ್ಮ ಹೆಸರು ಮತ್ತು ಇಮೇಲ್ ನಮೂದಿಸಬೇಕಾಗುತ್ತದೆ. ಇಮೇಲ್ ನಮೂದಿಸುವುದು ಕಡ್ಡಾಯವಲ್ಲ.

ಹೀಗೆ ಮೊಬೈಲ್ ಸಂಖ್ಯೆ ನೋಂದಣಿ ಮಾಡಿಕೊಂಡಾಗ ನಾವು ನಮೂದಿಸಿದ ಹೆಸರು ಟ್ರೂ ಕಾಲರ್‌ನಲ್ಲಿಡಿಸ್ ಪ್ಲೇ ಆಗುತ್ತದೆ. ಅಂದರೆ ಇನ್ನೊಬ್ಬರಿಗೆ ಕರೆ ಮಾಡುವಾಗ ಅವರು ನಮ್ಮ ಸಂಖ್ಯೆಯನ್ನು ಸೇವ್ ಮಾಡದೇ ಇದ್ದರೆ, ಟ್ರೂ ಕಾಲರ್ ಆ್ಯಪ್‍ನಲ್ಲಿ ನಮ್ಮ ಹೆಸರು ಡಿಸ್ ಪ್ಲೇ ಆಗುತ್ತದೆ.

ಪ್ರೊಫೈಲ್ ಎಡಿಟ್ ಮಾಡುವುದು ಹೇಗೆ?
ಒಂದು ವೇಳೆ ನಿಮಗೆ ಈ ಆ್ಯಪ್‍ನಲ್ಲಿ ನಿಮ್ಮ ಹೆಸರು ಬದಲಿಸಬೇಕು ಎಂದಿದ್ದರೆ ಟ್ರೂ ಕಾಲರ್ ಆ್ಯಪ್ ಓಪನ್ ಮಾಡಿ. ಎಡಭಾಗದಲ್ಲಿರುವ ಡ್ರಾಪ್ ಡೌನ್ ಮೆನು ಕ್ಲಿಕ್ ಮಾಡಿ. ಅಲ್ಲಿ ಕೆಳಗೆ ಎಡಿಟ್ ಪ್ರೊಫೈಲ್ ಎಂದು ಕಾಣಿಸುತ್ತದೆ. ಅಲ್ಲಿ ನಿಮ್ಮ ಹೆಸರಿನ ಮುಂದೆ ಇರುವ ಪೆನ್ಸಿಲ್ ಐಕಾನ್ ಕ್ಲಿಕ್ ಮಾಡಿ ನಿಮ್ಮ ಹೆಸರು ಬದಲಿಸಬಹುದು. ಹೆಸರು ಬದಲಿಸಿದ ನಂತರ ಸೇವ್ ಮಾಡಿ.

ಇನ್ಯಾರದ್ದೋ ಹೆಸರು ಕಾಣಿಸುತ್ತದೆ ಯಾಕೆ?
ಟ್ರೂ ಕಾಲರ್ ನೀವು ಬಳಸುತ್ತಿಲ್ಲ ಎಂದಿಟ್ಟುಕೊಳ್ಳಿ. ಆದರೆ ಟ್ರೂ ಕಾಲರ್ ಬಳಸುವ ಇನ್ನೊಬ್ಬರಿಗೆ ಕರೆ ಮಾಡಿದಾಗ ನಿಮ್ಮ ಹೆಸರು ಟ್ರೂ ಕಾಲರ್‌ನಲ್ಲಿ ಡಿಸ್ ಪ್ಲೇ ಆಗುವ ಬದಲು ಬೇರೇನೋ ಡಿಸ್‍ಪ್ಲೇ ಆಗುತ್ತದೆ. ಕೆಲವೊಮ್ಮೆ ಅಲ್ಲಿ ಡಿಸ್ ಪ್ಲೇ ಆಗುವ ಹೆಸರುಗಳು ಮುಜುಗರ ಉಂಟು ಮಾಡಲೂಬಹುದು.

ಹೀಗಾಗುವುದಕ್ಕೆ ಕಾರಣ ನೀವು ಈಗ ಬಳಸುತ್ತಿರುವ ಫೋನ್ ಸಂಖ್ಯೆ ಈ ಹಿಂದೆ ಯಾರೋ ಬಳಸುತ್ತಿದ್ದು, ಟ್ರೂ ಕಾಲರ್ ಡಾಟಾಬೇಸ್‍ನಲ್ಲಿ ಹಳೆಯ ಮಾಹಿತಿಗಳೇ ಸೇವ್ ಆಗಿದ್ದರೆ ಈ ರೀತಿ ಹೆಸರು ಡಿಸ್ ಪ್ಲೇ ಆಗುವ ಸಾಧ್ಯತೆ ಇದೆ. ಟ್ರೂ ಕಾಲರ್ ಮಾಹಿತಿಯನ್ನು ಕ್ರೌಡ್ ಸೋರ್ಸಿಂಗ್ ಮಾಡುತ್ತಿರುವುದರಿಂದಲೇ ಈ ರೀತಿ ಹೆಸರು ಡಿಸ್ ಪ್ಲೇ ಆಗುತ್ತದೆ.

ಸಾಮಾನ್ಯವಾಗಿ ನೀವು ಹೊಸ ಫೋನ್ ಸಂಖ್ಯೆ ಬಳಸುವಾಗ ಈ ರೀತಿ ಆಗುತ್ತದೆ. ಹೀಗಾಗಿದ್ದರೆ ಟ್ರೂ ಕಾಲರ್ ಆ್ಯಪ್‍ನಲ್ಲಿ ನಿಮ್ಮ ಫೋನ್ ಸಂಖ್ಯೆ ನೋಂದಣಿ ಮಾಡಿ ಹೆಸರು ಬದಲಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.