ಪ್ರಮುಖ ಸ್ಮಾರ್ಟ್ಫೋನ್ ಕಂಪನಿ ಐಟೆಲ್, ತನ್ನ ಎರಡು ಹೊಸ ಮಾದರಿಗಳಾದ ಐಟೆಲ್ ಪಿ55 ಪವರ್ 5ಜಿ (itel P55 Power 5G) ಹಾಗೂ ಐಟೆಲ್ ಎಸ್23+ (itel S23+) ಸ್ಮಾರ್ಟ್ಫೋನ್ಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ.

ಐಟೆಲ್ P55 ಪವರ್ 5G ಫೋನ್, ಮಿಡಿಯಾ ಟೆಕ್ ಡೈಮೆನ್ಸಿಟಿ 6080 ಒಕ್ಟಾ ಕೋರ್ ಕಾರ್ಯಾಚರಣಾ ವ್ಯವಸ್ಥೆ ಹೊಂದಿದ್ದು, 5000mAH ಬ್ಯಾಟರಿ ಹಾಗೂ 18W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಎರಡು ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ನ ಹಿಂಬದಿ ಕ್ಯಾಮೆರಾ 50MP ಹಾಗೂ ಸೆಲ್ಫಿ ಕ್ಯಾಮೆರಾ 8MP ಇದೆ.

4GB +4GB RAM, 64GB ROM ಮತ್ತು 6GB+6GB RAM, 128GB ROM ಸ್ಟೋರೇಜ್ ಸೌಲಭ್ಯಗಳುಳ್ಳ ಎರಡು ಮಾದರಿಯಲ್ಲಿ ಐಟೆಲ್ P55 ಪವರ್ 5G ಸ್ಮಾರ್ಟ್ಫೋನ್ ಸಿಗುತ್ತದೆ. ಈ ಮಾದರಿಯ ಫೋನ್ಗಳನ್ನು ಕ್ರಮವಾಗಿ ₹ 9,699 ಮತ್ತು ₹ 9,999ಕ್ಕೆ ಖರೀದಿಸಬಹುದಾಗಿದೆ.

ಐಟೆಲ್ S23+ ಮೊಬೈಲ್, 16(8+8) GB RAM+ 256 ROM ಸ್ಟೋರೇಜ್ ಸೌಲಭ್ಯ ಹೊಂದಿದೆ. 5000mAH ಬ್ಯಾಟರಿ ಹಾಗೂ ವೇಗದ ಚಾರ್ಜಿಂಗ್ ಸಾಮರ್ಥ್ಯವುಳ್ಳ ಈ ಫೋನ್ನಲ್ಲಿ ಸುರಕ್ಷತೆಗೆ ಒತ್ತು ನೀಡಲಾಗಿದೆ. ಫೇಸ್ಐಡಿ ಮತ್ತು ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಅಳವಡಿಸಲಾಗಿದೆ.

ಆಂಡ್ರಾಯ್ಡ್ 13 ಆಧಾರಿತ ಟಿ ಒಎಸ್ ಎಂಬ ಕಾರ್ಯಾಚರಣಾ ವ್ಯವಸ್ಥೆ ಇದರಲ್ಲಿದ್ದು ಹಿಂಬದಿ ಕ್ಯಾಮೆರಾ 50MP ಹಾಗೂ ಸೆಲ್ಫಿ ಕ್ಯಾಮೆರಾ 32MP ಇದೆ. 6.78 ಇಂಚಿನ ದೊಡ್ಡ ಪರದೆ ಹೊಂದಿರುವ ಫೋನ್ಗೆ 3D curved AMOLED ಡಿಸ್ಪ್ಲೇ ವಿನ್ಯಾಸಗೊಳಿಸಲಾಗಿದೆ.

₹ 13,999ಕ್ಕೆ ಖರೀದಿಸಬಹುದಾದ ಈ ಫೋನ್, ಮಾರುಕಟ್ಟೆಯಲ್ಲಿ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.