ಗುರುಗ್ರಾಮ: ಸ್ಯಾಮ್ಸಂಗ್ ತನ್ನ ನೂತನ Galaxy F54 5G ಸ್ಮಾರ್ಟ್ಫೋನ್ ಅನ್ನು ಜೂನ್ 6ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಇದು ಸ್ಯಾಮ್ಸಂಗ್ನ F ಸರಣಿಯ ಪ್ರೀಮಿಯಂ ಸ್ಮಾರ್ಟ್ ಫೋನ್ ಆಗಿದೆ.

ಫೋಟೊ ಪ್ರಿಯರಿಗೆ ಉತ್ತಮ ಆಯ್ಕೆಯಾಗಿರುವ ಈ ಫೋನ್ನಲ್ಲಿ ನೈಟೋಗ್ರಫಿ ಫೀಚರ್ ಇರುವುದು ವಿಶೇಷ. ಮಂದ ಬೆಳಕಿನಲ್ಲಿಯೂ ಗುಣಮಟ್ಟದ ಫೋಟೊಗ್ರಫಿ ಇದರಿಂದ ಸಾಧ್ಯ.

108 ಎಂಪಿ ಫ್ರಂಟ್ ಕ್ಯಾಮೆರಾ ಇದ್ದು, ನೋ ಶೇಕ್ ಫೀಚರ್ ಇರುವುದರಿಂದ ಉತ್ತಮ ಗುಣಮಟ್ಟದ ಫೋಟೊ ಹಾಗೂ ವಿಡಿಯೊ ಸಾಧ್ಯವಾಗಲಿದೆ. ಬ್ಲರ್ ಇಮೇಜ್ ಹಾಗೂ ವಿಡಿಯೊಗಳ ಸಮಸ್ಯೆ ಇಲ್ಲ ಎನ್ನುವುದು ಕಂಪನಿಯ ಗ್ಯಾರಂಟಿ.

GalaxyS23 ಸರಣಿಯಲ್ಲಿ ಇತ್ತೀಚೆಗೆ ಪರಿಚಯಿಸಲಾದ ಆಸ್ಟ್ರೋಲ್ಯಾಪ್ಸ್ ಫೀಚರ್ನಿಂದಾಗಿ, ರಾತ್ರಿ ವೇಳೆ ಆಕಾಶ, ಚಂದ್ರ, ನಕ್ಷತ್ರಗಳ ಮಜಬೂತಾದ ಚಿತ್ರಗಳನ್ನು ಕ್ಲಿಕ್ಕಿಸಬಹುದು.

ಉತ್ತಮ ಸೆಲ್ಫಿ ಕ್ಯಾಮೆರಾ ಕೂಡ ಇದ್ದು, ವಿವಿಧ ಬೆಳಕಿನಲ್ಲಿ ಗುಣಮಟ್ಟದ ಫೋಟೊ ತೆಗೆದುಕೊಳ್ಳಬಹುದು. ಇನ್ಬಿಲ್ಟ್ 16 ವಿವಿಧ ಫನ್ ಮೋಡ್ ಕೂಡ ಇದ್ದು ಹೊಸ ತಲೆಮಾರಿನ ಕ್ಯಾಮೆರಾ ಫ್ರೀಕ್ ಯುವಕರಿಗೆ ಇದು ಉತ್ತಮ ಮೊಬೈಲ್ ಆಗಬಹುದು.

ಜೂನ್ 6 ರಿಂದ ಮಾರಾಟ ಆರಂಭವಾಗಲಿದ್ದು, ಮೇ 30 ರಿಂದ ಪ್ರೀ-ಆರ್ಡರ್ ತೆರೆದುಕೊಳ್ಳಲಿದೆ. ಫ್ಲಿಪ್ಕಾರ್ಟ್ ಮತ್ತು Samsung.com ನಲ್ಲಿ ಮಾತ್ರ ಖರೀದಿಗೆ ಅವಕಾಶ ಇದೆ. ₹999 ಪಾವತಿ ಮಾಡಿ ಪ್ರೀ ಆರ್ಡರ್ ಮಾಡಬಹುದು. ಪ್ರೀ ಆರ್ಡರ್ ಮಾಡಿದವರಿಗೆ ₹ 2000 ಮೌಲ್ಯದ ಅನುಕೂಲಗಳೂ ಸಿಗಲಿವೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.