ಆಡಿಯೊ ಸಂಬಂಧಿತ ಎಲೆಕ್ಟ್ರಾನಿಕ್ ಸಾಧನಗಳಿಗೆ ಹೆಸರಾಗಿರುವ ಸೋನಿ ಇತ್ತೀಚೆಗೆ ಅಲ್ಟ್ (ಅಲ್ಟಿಮೇಟ್) ಸರಣಿಯ ಸಾಧನಗಳನ್ನು ಬಿಡುಗಡೆ ಮಾಡಿದ್ದು, ಅಲ್ಟ್ ವೇರ್ (Sony ULT Wear) ಹೆಸರಿನ ಹೆಡ್ಫೋನ್ ಮುಖ್ಯವಾಗಿ ಗೇಮಿಂಗ್ ಹಾಗೂ ಸಂಗೀತ ಪ್ರಿಯ ಯುವಜನರನ್ನೇ ಗುರಿಯಾಗಿಸಿ ರೂಪಿಸಲಾಗಿದೆ. ಇದರ ಬೆಲೆ ₹16,990. ಎರಡು ವಾರ ಬಳಸಿ ನೋಡಿದಾಗ ಅದರಲ್ಲಿ ಕಂಡು ಬಂದ ಅಂಶಗಳು ಹೀಗಿವೆ.

ವಿನ್ಯಾಸ

ಹಗುರವಾದ ಮತ್ತು ಕಿವಿಯ ಮೇಲ್ಭಾಗದಲ್ಲಿ ಸರಿಯಾಗಿ ಕೂರುವಂತೆ ಮಡಚಿ ಹೊಂದಿಸಿಕೊಳ್ಳುವ ವ್ಯವಸ್ಥೆಯಿರುವ ಹೆಡ್ಫೋನ್ ಇದು. ತಲೆಯ ಮೇಲೆ ಧರಿಸಲು ಅನುಕೂಲಕರವಾಗಿದ್ದು, ಗಟ್ಟಿಯಾದ ಮತ್ತು ಅಳತೆ ಹೊಂದಿಸಿಕೊಳ್ಳಬಹುದಾದ ಹೆಡ್ಬ್ಯಾಂಡ್ ಇದೆ. ಕಿವಿಯನ್ನು ಆವರಿಸುವ, ಕುಶನ್ನಿಂದ ಕೂಡಿರುವ ಇಯರ್-ಕಪ್ಗಳು ನೋಡುವುದಕ್ಕೂ ಆಕರ್ಷಕಣೀಯ. ಯುಎಲ್ಟಿ ಬಟನ್ ಹಾಗೂ ಸೋನಿ ಲೋಗೊಗಳು, ಬೆಳಕು ಬಿದ್ದಾಗ ಕಾಮನಬಿಲ್ಲಿನ ಬಣ್ಣ ಪ್ರತಿಫಲಿಸಿ ವಿಶೇಷ ಆಕರ್ಷಣೆ ನೀಡುತ್ತವೆ. ಇಯರ್-ಕಪ್ಗಳನ್ನು ಹೇಗೆ ಕೂರಿಸಲಾಗಿದೆ ಎಂದರೆ, ಅವುಗಳನ್ನು ಬೇಕಾದ ಕೋನಕ್ಕೆ ತಿರುಗಿಸಿ ಮಡಚಬಹುದಾಗಿದ್ದು, ಕಾಂಪ್ಯಾಕ್ಟ್ ಕೇಸ್ (ಹೆಡ್ಫೋನ್ ಜೊತೆಗೇ ಒದಗಿಸಲಾಗಿರುತ್ತದೆ) ಒಳಗೆ ಈ ಹೆಡ್ಫೋನ್ ಕೂರುತ್ತವೆ. ಪ್ರಯಾಣ ಮಾಡುವಾಗ ನಮ್ಮ ಬ್ಯಾಗ್ನೊಳಗೆ ಹೆಡ್ಫೋನನ್ನು ಒಯ್ಯಲು ತೀರಾ ಅನುಕೂಲಕರವಾದ ಕೇಸ್ ಇದು.

ಧ್ವನಿ ಗುಣಮಟ್ಟ

ಅಲ್ಟ್ ವೇರ್ ಹೆಡ್ಫೋನ್ನಲ್ಲಿ ಆಲಿಸುವ ಧ್ವನಿಯ ಗುಣಮಟ್ಟದ ಬಗ್ಗೆ ಎರಡು ಮಾತೇ ಇಲ್ಲ. ಕಿವಿಯ ಮೇಲಿರುವ ಕುಶನ್-ಭರಿತ ಇಯರ್ ಕಪ್ಗಳು ಹೊರಗಿನ ಗದ್ದಲ ಒಳಗೆ ಬಾರದಂತೆ ಮತ್ತು ಸಾಧನದ ಮೂಲಕ ಕೇಳಿಸುವ ಧ್ವನಿಯು ಹೊರಗೆ ಹೋಗದಂತೆ ತಡೆಯುವುದರಿಂದ, ಹಾಡುಗಳನ್ನು ಆನಂದದಿಂದ ಆಲಿಸಬಹುದು. ಎಡ ಇಯರ್-ಕಪ್ನಲ್ಲಿ ಪವರ್ ಬಟನ್, ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇದೆ. ಇದರೊಂದಿಗೆ, ಹೊರಗಿನ ಸದ್ದು ಸಂಪೂರ್ಣವಾಗಿ ತಡೆಯುವ ನಾಯ್ಸ್ ಕ್ಯಾನ್ಸಲೇಶನ್ ಬಟನ್ ಇದೆ. ಇದನ್ನು ಮತ್ತೊಮ್ಮೆ ಒತ್ತಿದರೆ ಹೊರಗಿನ (ಏಂಬಿಯಂಟ್) ಸದ್ದು ಕೇಳಿಸುತ್ತದೆ. ಪಕ್ಕದಲ್ಲೇ ಇರುವ, ಹೊಳೆಯುವ ULT ಬಟನ್ ಆನ್ ಮಾಡಿದರೆ, ಬೇಸ್ (Bass) ಧ್ವನಿ ಗರಿಷ್ಠ ಮಟ್ಟದಲ್ಲಿ ಕೇಳಿಸುತ್ತದೆ.

ಬಲಭಾಗದ ಇಯರ್ಕಪ್ನ ಮೇಲ್ಮೈಯಲ್ಲಿ ಸ್ಪರ್ಶ-ಸಂವೇದಿ ಬಟನ್ಗಳಿವೆ. ಇಲ್ಲಿ ಹಾಡಿನ ವಾಲ್ಯೂಮ್ ಹೆಚ್ಚು-ಕಡಿಮೆ ಮಾಡಬಹುದು, ಪ್ಲೇ-ಪಾಸ್ ಮಾಡಬಹುದು.

ಅಲ್ಟ್ (ಅಲ್ಟಿಮೇಟ್) ಬಟನ್ನಲ್ಲಿ ಎರಡು ಮೋಡ್ ಇದ್ದು, ಮೊದಲನೆಯದು ಸಾಮಾನ್ಯ ಹಾಡುಗಳಿಗೆ ಹೆಚ್ಚಿನ ಬೇಸ್ ಒದಗಿಸುತ್ತದೆಯಾದರೆ, ಅಲ್ಟ್2 ಮೋಡ್ನಲ್ಲಿ ಗರಿಷ್ಠ ಬೇಸ್ ಸದ್ದು ಕೇಳಿಸುತ್ತದೆ. ಅದ್ಭುತವಾದ ಬೇಸ್ ಇರುವ ಸಂಗೀತೋಪಕರಣಗಳಿಂದ ಹೊರಸೂಸುವ ಸದ್ದು ಇಷ್ಟಪಡುವವರಿಗೆ ಮತ್ತು ಈಗಿನ ಆಧುನಿಕ ಡಿಜೆ ಸೌಂಡ್ ಎಫೆಕ್ಟ್ ಇಷ್ಟಪಡುವವರಿಗೆ, ಗೇಮ್ಸ್ ಆಡುವಾಗ ಕೇಳಿಬರುವ ಧ್ವನಿಗಳನ್ನು ಜೋರಾಗಿ ಕೇಳಿಸಿಕೊಳ್ಳಬೇಕೆನ್ನುವವರಿಗೆ ಈ ಬೇಸ್ ಬೂಸ್ಟರ್ ವ್ಯವಸ್ಥೆ ಇಷ್ಟವಾಗಬಹುದು. ಅಲ್ಟ್2 ಮೋಡ್ನಲ್ಲಿ ಅತಿ ಎನಿಸುವಷ್ಟು ಬೇಸ್ ಧ್ವನಿ ಹೊರಹೊಮ್ಮುತ್ತದೆ. ಸಾಮಾನ್ಯ ಹಾಡುಗಳಿಗೆ ಅಲ್ಟ್1 ಮೋಡ್ ಸಾಕಾಗುತ್ತದೆ.

ಸಂಪರ್ಕ:

ಬ್ಲೂಟೂತ್ ಮೂಲಕ ಸ್ಮಾರ್ಟ್ಫೋನ್, ಟಿವಿ, ಕಂಪ್ಯೂಟರ್ ಹಾಗೂ ಬೇರಾವುದೇ ಪ್ಲೇಯರ್ಗಳನ್ನು ಸಂಪರ್ಕಿಸಬಹುದಾಗಿದ್ದರೆ, ಕಂಪ್ಯೂಟರ್ ಅಥವಾ ಸಂಗೀತ ಸಾಧನಗಳಿಗೆ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ 3.5 ಜ್ಯಾಕ್ ಇದೆ ಮತ್ತು ಕೇಬಲ್ ಕೂಡ ನೀಡಲಾಗಿದೆ. ಬ್ಲೂಟೂತ್ ಮೂಲಕ ಸಂಪರ್ಕ ಮಾಡುವುದು ಅತ್ಯಂತ ಸುಲಭ ಪ್ರಕ್ರಿಯೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್ನ ಅಗತ್ಯವಿರುವುದಿಲ್ಲ. ಆದರೆ, ಸೋನಿ ಹೆಡ್ಫೋನ್ಸ್ ಕನೆಕ್ಟ್ ಹೆಸರಿನ ಆ್ಯಪ್ ಅಳವಡಿಸಿಕೊಂಡಲ್ಲಿ, ಈಕ್ವಲೈಜರ್ ಬಳಕೆ ಸೇರಿದಂತೆ ಧ್ವನಿಯನ್ನು ಸಮರ್ಪಕವಾಗಿ ನಿಭಾಯಿಸುವ, ಬೇಕಾದಂತೆ ಹೊಂದಿಸಿಕೊಳ್ಳುವ ಹೆಚ್ಚಿನ ಆಯ್ಕೆಗಳು ದೊರೆಯುತ್ತವೆ.

ಎಎನ್ಸಿ ಅಥವಾ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಬಟನ್ ಒಮ್ಮೆ ಒತ್ತಿದರೆ ಹೊರಗಿನ ಸದ್ದು ಯಾವುದೂ ಕೇಳಿಸದೆ, ಕೇವಲ ಹಾಡನ್ನು ಆನಂದಿಸಬಹುದು. ಪುನಃ ಒತ್ತಿದಾಗ ಸುತ್ತಿಲಿನ ಧ್ವನಿ (ಏಂಬಿಯೆಂಟ್) ಕೇಳಿಸುತ್ತದೆ. ಹೀಗಾಗಿ ಸ್ನೇಹಿತರೊಂದಿಗೆ ಇರುವಾಗ, ಯಾರಾದರೂ ಏನಾದರೂ ಹೇಳಿದರೆ ಕೇಳಿಸಿಕೊಂಡು ಸಂಭಾಷಣೆ ಮುಂದುವರಿಸಬಹುದು.

ಬ್ಯಾಟರಿ

ಕೇಬಲ್ ಮೂಲಕ ಸಂಪರ್ಕಿಸಿದರೆ ಬ್ಯಾಟರಿಯೇನೂ ಬಳಕೆಯಾಗುವುದಿಲ್ಲ. ಆದರೆ ಬ್ಲೂಟೂತ್ ಮೂಲಕ ಸಂಪರ್ಕಿಸಿ ಹಾಡುಗಳನ್ನು ಆಲಿಸಲು ಬ್ಯಾಟರಿ ಚಾರ್ಜ್ ಬೇಕಾಗುತ್ತದೆ. ನಾಯ್ಸ್ ಕ್ಯಾನ್ಸಲಿಂಗ್ ಆನ್ ಮಾಡಿಟ್ಟುಕೊಂಡರೆ ಸಹಜವಾಗಿ ಹೆಚ್ಚುವರಿ ಬ್ಯಾಟರಿ ಬೇಕಾಗುತ್ತದೆ. ನಾಯ್ಸ್ ಕ್ಯಾನ್ಸಲಿಂಗ್ ಆನ್ ಮಾಡಿಟ್ಟುಕೊಂಡರೂ ಸುಮಾರು 30 ಗಂಟೆಗಳ ಕಾಲ ಸತತವಾಗಿ ಹಾಡುಗಳನ್ನು ಕೇಳುವಷ್ಟು ಬ್ಯಾಟರಿ ಸಾಮರ್ಥ್ಯ ಇದರಲ್ಲಿದೆ. ಬ್ಯಾಟರಿಯು ಶೂನ್ಯದಿಂದ ಪೂರ್ಣವಾಗಿ (ಶೇ.100) ಚಾರ್ಜ್ ಆಗಲು ಸುಮಾರು ಮೂರುವರೆ ಗಂಟೆ ಬೇಕಾಗುತ್ತದೆ. ಆದರೆ, ಕೇವಲ ಮೂರ್ನಾಲ್ಕು ನಿಮಿಷ ಕ್ಷಿಪ್ರವಾಗಿ ಚಾರ್ಜ್ ಮಾಡಿದರೆ ಒಂದುವರೆ ಗಂಟೆ ಹಾಡು ಕೇಳಲು ಯಾವುದೇ ಸಮಸ್ಯೆಯಾಗದು.

ಒಟ್ಟಿನಲ್ಲಿ, ಸೋನಿ ಅಲ್ಟ್ ವೇರ್ ಹೆಡ್ಫೋನ್ ಮಧ್ಯಮ ಶ್ರೇಣಿಯ ಬಜೆಟ್ನಲ್ಲಿ ಉತ್ತಮ ಹೆಡ್ಫೋನ್ ಅನಿಸುತ್ತದೆ. ಹಗುರವಾದ, ಆಕರ್ಷಕ ವಿನ್ಯಾಸದ ಮತ್ತು ವಿಶೇಷವಾಗಿ ಬೇಸ್ ಧ್ವನಿ ಇಷ್ಟಪಡುವವರಿಗೆ ಇದು ಇಷ್ಟವಾಗುತ್ತದೆ. ಅದೇ ರೀತಿ ಸುತ್ತಮುತ್ತಲಿನ ಧ್ವನಿಯನ್ನು ಕೇಳಿಸದಂತೆ ಮಾಡುವ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ವೈಶಿಷ್ಟ್ಯ ಗಮನ ಸೆಳೆಯುತ್ತದೆ. ಉತ್ತಮ ಗುಣಮಟ್ಟದ ಸ್ಟೀರಿಯೋ ಧ್ವನಿಯ ಹಾಡುಗಳನ್ನು ಆನಂದಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.