ನವದೆಹಲಿ: ವಾಟ್ಸ್ಆ್ಯಪ್ ಮೂಲಕ ಧ್ವನಿ ಮತ್ತು ವಿಡಿಯೊ ಕರೆ ಮಾಡುವಾಗ ಇನ್ನು ಮುಂದೆ ಏಕಕಾಲದಲ್ಲಿ 32 ಜನರ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ. ಅಲ್ಲದೆ, ಒಂದೇ ಬಾರಿಗೆ ಗರಿಷ್ಠ 2 ಜಿ.ಬಿ.ವರೆಗಿನ ಕಡತಗಳನ್ನು ಕಳುಹಿಸಲಿಕ್ಕೂ ವಾಟ್ಸ್ಆ್ಯಪ್ ಅವಕಾಶ ಕಲ್ಪಿಸಲಿದೆ.

ವಾಟ್ಸ್ಆ್ಯಪ್ ಗುಂಪಿನಲ್ಲಿ ಇನ್ನು ಮುಂದೆ ಗರಿಷ್ಠ 1,024 ಜನರನ್ನು ಸೇರಿಸಿಕೊಳ್ಳಲು ಆಗಲಿದೆ ಎಂದು ಕಂಪನಿ ಗುರುವಾರ ತಿಳಿಸಿದೆ.

ಗರಿಷ್ಠ ಐದು ಸಾವಿರ ಜನರಿಗೆ ಸಂದೇಶಗಳನ್ನು ಬ್ರಾಡ್ಕಾಸ್ಟ್ ಮಾಡಲು ಸಾಧ್ಯವಾಗಲಿದೆ. ವಾಟ್ಸ್ಆ್ಯಪ್ ಮೂಲಕ ಅಭಿಪ್ರಾಯ ಸಂಗ್ರಹ (ಪೋಲ್) ನಡೆಸಲು ಅವಕಾಶ ಸಿಗಲಿದೆ.

‘ವಾಟ್ಸ್ಆ್ಯಪ್ನಲ್ಲಿ ನಾವು ಇಂದು ‘ಕಮ್ಯುನಿಟೀಸ್’ಗೆ ಚಾಲನೆ ನೀಡುತ್ತಿದ್ದೇವೆ. ಇದರ ಮೂಲಕ ಗ್ರೂಪ್ಗಳು ಇನ್ನಷ್ಟು ಉತ್ತಮವಾಗುತ್ತವೆ... ಪೋಲ್ ಹಾಗೂ ಒಂದೇ ಬಾರಿಗೆ 32 ಜನರಿಗೆ ವಿಡಿಯೊ ಕರೆ ಮಾಡುವ ಸೌಲಭ್ಯವನ್ನು ಕೂಡ ನಾವು ಆರಂಭಿಸುತ್ತಿದ್ದೇವೆ’ ಎಂದು ವಾಟ್ಸ್ಆ್ಯಪ್ನ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿಯ ಸಂಸ್ಥಾಪಕ ಮಾರ್ಕ್ ಝಕರ್ಬರ್ಗ್ ಹೇಳಿದ್ದಾರೆ.

ಈ ಸೌಲಭ್ಯಗಳು ಆರಂಭವಾಗುವ ಕುರಿತು ಕಂಪನಿಯು ಏಪ್ರಿಲ್ನಲ್ಲಿ ಘೋಷಣೆ ಮಾಡಿತ್ತು. ಈಗ ಅವುಗಳನ್ನು ಆರಂಭಿಸುತ್ತಿದೆ. ಇವು ಮುಂದಿನ ಕೆಲವು ವಾರಗಳಲ್ಲಿ ಎಲ್ಲ ಬಳಕೆದಾರರಿಗೆ ಹಂತ ಹಂತವಾಗಿ ಲಭ್ಯವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.