ಬೆಂಗಳೂರು: ಆ್ಯಪಲ್ ಬಹುನಿರೀಕ್ಷಿತ ಐಓಎಸ್ ಅಪ್ಡೇಟ್ 16.2 ಕೊನೆಗೂ ಬಿಡುಗಡೆಯಾಗಿದೆ. ಅರ್ಹ ಐಪೋನ್ ಬಳಕೆದಾರರು ನೂತನ ಅಪ್ಡೇಟ್ ಡೌನ್ಲೋಡ್ ಮಾಡಿಕೊಂಡು ಬಳಸಬಹುದಾಗಿದೆ.

ಹೊಸ 16.2 ಅಪ್ಡೇಟ್ ಬಿಡುಗಡೆಯಾಗುವುದರ ಮೂಲಕ, ದೇಶದಲ್ಲಿ ಐಫೋನ್ಗಳಲ್ಲಿ 5G ಸೇವೆ ಒದಗಿಸಲು ಸಾಧ್ಯವಾಗಿದ್ದು, ಡಿವೈಸ್ ಅಪ್ಡೇಟ್ ಆಗಿದೆ. ಪ್ರಸ್ತುತ ಭಾರತದಲ್ಲಿ ರಿಲಯನ್ಸ್ ಜಿಯೊ ಮತ್ತು ಏರ್ಟೆಲ್ 5G ಸೇವೆ ಒದಗಿಸುತ್ತಿದೆ.

5G ಸೇವೆ ಆರಂಭವಾದ ಬಳಿಕ ಸರ್ಕಾರ, ಎಲ್ಲ ಪ್ರಮುಖ ಸ್ಮಾರ್ಟ್ಫೋನ್ ಕಂಪನಿಗಳಿಗೆ ಅಪ್ಡೇಟ್ ಒದಗಿಸುವಂತೆ ಸೂಚಿಸಿತ್ತು. ಅದರಂತೆ, ಪರೀಕ್ಷಾರ್ಥ ಬಳಕೆಯ ಬಳಿಕ ಆ್ಯಪಲ್, ಒನ್ಪ್ಲಸ್ ಮತ್ತು ಮೊಟೊರೊಲಾ 5G ಸಾಫ್ಟ್ವೇರ್ ಅಪ್ಡೇಟ್ ಬಿಡುಗಡೆ ಮಾಡಿದೆ.

ಆ್ಯಪಲ್ ಐಫೋನ್ಗಳಿಗೆ 16.2 ಐಓಎಸ್ ಬಿಡುಗಡೆಯಾಗಿದ್ದು, 5G ಕವರೇಜ್ ಇರುವ ನಗರಗಳಲ್ಲಿ ರಿಲಯನ್ಸ್ ಜಿಯೊ ಬಳಕೆದಾರರಿಗೆ 5G ಸೇವೆ ಲಭ್ಯವಾಗುತ್ತಿದೆ.

ಆದರೆ, ಏರ್ಟೆಲ್ ನೆಟ್ವರ್ಕ್ನಲ್ಲಿ 5G ಸೇವೆ ಇಂದಿನಿಂದ ಲಭ್ಯವಾಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಬೆಂಗಳೂರು ಸಹಿತ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ 5G ಸೇವೆ ಒದಗಿಸುವುದಾಗಿ ಏರ್ಟೆಲ್ ಕಂಪನಿ ಹೇಳಿತ್ತು.

5G Service: ನಿಮ್ಮ ಸ್ಮಾರ್ಟ್ಫೋನ್ನಲ್ಲಿ 5G ಬಳಸುವುದು ಹೇಗೆ?

ಈ ಮೊದಲು ಹೇಳಿರುವಂತೆ, ಡಿಸೆಂಬರ್ ಆರಂಭದಲ್ಲೇ ಆ್ಯಪಲ್ ಐಫೋನ್ 12 ಮತ್ತು ನಂತರದ ಮಾದರಿಗಳಿಗೆ 5G ಅಪ್ಡೇಟ್ ಒದಗಿಸಿದೆ.

5ಜಿಗೆ ಬೇಕಿದೆ ಸಿದ್ಧತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.