ಲಾಹೋರ್: ಪಾಕಿಸ್ತಾನದ ಖಾಸಗಿ ವಾಹಿನಿಯೊಂದರ ನೇರಪ್ರಸಾರ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹೊಡೆದಾಡಿಕೊಂಡಿದ್ದಾರೆ.

ಚರ್ಚಾ ಕಾರ್ಯಕ್ರಮದ ವೇಳೆ ವಾದ ತೀವ್ರಗೊಂಡ ಹಿನ್ನೆಲೆ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ (ಪಿಟಿಐ) ಪಕ್ಷದ ಪರವಾಗಿ ಬಂದಿದ್ದ ವಕೀಲ ಶೇರ್ ಅಫಜಲ್ ಮರವತ್ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್ ಪರವಾಗಿ ಬಂದಿದ್ದ ಸೆನೆಟರ್ ಅಫಾನುಲ್ಹಾ ಖಾನ್ ಹೊಡೆದಾಡಿಕೊಂಡಿದ್ದಾರೆ.

ಕಾರ್ಯಕ್ರಮ ನಡೆಸಿಕೊಡುತ್ತಿದ್ದ ನಿರೂಪಕ ತಡೆಯಲು ಯತ್ನಿಸಿದರೂ ಡೆಸ್ಕ್ನಿಂದ ಎದ್ದು ಗಲಾಟೆ ಮಾಡಿದ್ದಾರೆ. ಕೊನೆಗೆ ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಇಬ್ಬರನ್ನೂ ದೂರ ಸರಿಸಿ ಗಲಾಟೆ ನಿಲ್ಲಿಸಿದ್ದಾರೆ.

ಇದರ ವಿಡಿಯೊವನ್ನು @Bukhari2204 ಎನ್ನುವ ಬಳಕೆದಾರರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.