ಚೆನ್ನೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ತಮಿಳುನಾಡಿನ ಶಾಲಾ ಮಕ್ಕಳ ಜತೆ ನೃತ್ಯ ಮಾಡುತ್ತಿರುವ ವಿಡಿಯೊವೊಂದು ಟ್ವಿಟರ್ನಲ್ಲಿ ವೈರಲ್ ಆಗಿದೆ.

ಮದುರೈನ ಮೌಂಟೇನ್ ವಿವ್ ಶಾಲೆಯಲ್ಲಿ ಕತ್ರಿನಾ ಮಕ್ಕಳ ಜತೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಕತ್ರಿನಾ ಅವರ ಅಭಿಮಾನಿಯೊಬ್ಬರು ಹಂಚಿಕೊಂಡಿರುವ ವಿಡಿಯೊವನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸುಮಾರು 5,000 ಮಂದಿ ಲೈಕ್ ಒತ್ತಿದ್ದಾರೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ದೀಪಾವಳಿ ಹಬ್ಬಕ್ಕೆ ಅಕ್ಷಯ್ ರಾಮಸೇತು ಸಿನಿಮಾ: ಟೀಸರ್ ಹೊರಬಂತು

ಶಾಲಾ ಸಿಬ್ಬಂದಿ ಜತೆ ನೃತ್ಯ ಮಾಡುತ್ತಿರುವ ಮತ್ತೊಂದು ವಿಡಿಯೊ ಕೂಡ ವೈರಲ್ ಆಗಿದೆ.

ಪರಿಹಾರ ಯೋಜನೆ ಅಡಿಯಲ್ಲಿ 2015ರಲ್ಲಿ ಮೌಂಟೇನ್ ವ್ಯೂ ಶಾಲೆ ಆರಂಭಿಸಲಾಗಿತ್ತು. ಹಿಂದುಳಿದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಒದಗಿಸುವುದಕ್ಕಾಗಿ ಶಾಲೆ ತೆರೆಯಲಾಗಿತ್ತು. ಮೌಂಟೇನ್ ವಿವ್ಯೂ ಶಾಲೆಯ ಜತೆ ಕತ್ರಿನಾ ಕೈಫ್ ಅವರ ತಾಯಿ ಸುಝೇನ್ ನಂಟು ಹೊಂದಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಪಾಠವನ್ನೂ ಮಾಡಿದ್ದರು.

ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮೌಂಟೇನ್ ವಿವ್ಯೂ ಶಾಲೆಗೆ ದೇಣಿಗೆ ನೀಡುವಂತೆ 2020ರಲ್ಲಿ ಕತ್ರಿನಾ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.