ಕಾಬೂಲ್: ಅಫ್ಗಾನಿಸ್ತಾನದ ಮೂರು ಪ್ರಾಂತ್ಯಗಳನ್ನು ತಾಲಿಬಾನ್ ಮತ್ತೆ ವಶಪಡಿಸಿಕೊಂಡಿದೆ. ಇದರಿಂದಾಗಿ, ದೇಶದ ಮೂರನೇ ಎರಡರಷ್ಟು ಭಾಗ ತಾಲಿಬಾನ್ ನಿಯಂತ್ರಣದಲ್ಲಿದೆ.

ಈಶಾನ್ಯ ಭಾಗದ ಬದಖ್ಷಾನ್ ಮತ್ತು ಪಶ್ಚಿಮ ಭಾಗದ ಬಘ್ಲಾನ್ ಹಾಗೂ ಫರಾಹ್ ಪ್ರಾಂತ್ಯಗಳ ರಾಜಧಾನಿಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ.

ಅಫ್ಗಾನಿಸ್ತಾನದ ಅಧ್ಯಕ್ಷ ಅಷ್ರಫ್ ಘನಿ ಬಲ್ಖ್ ಪ್ರಾಂತ್ಯಕ್ಕೆ ಧಾವಿಸಿದ್ದು, ತಾಲಿಬಾನ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ತಾಲಿಬಾನ್ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಾಬಲ್ಯವನ್ನು ತೀವ್ರ ಗತಿಯಲ್ಲಿ ಸಾಧಿಸುತ್ತಿರುವುದು ಅಫ್ಗಾನಿಸ್ತಾನದ ಸರ್ಕಾರವನ್ನು ಚಿಂತೆಗೀಡು ಮಾಡಿದೆ. ಹಲವೆಡೆ ಯುದ್ಧದ ಸ್ಥಳಗಳಿಂದ ವಿಶೇಷ ಕಾರ್ಯಾಚರಣೆ ಪಡೆಗಳೇ ಪಲಾಯನಗೈದಿವೆ. ಅಪಾರ ವೆಚ್ಚ ಮಾಡಿ ತರಬೇತಿ ಪಡೆದಿದ್ದರೂ ಸೇನಾ ಪಡೆಗಳು ಯುದ್ಧ ಭೂಮಿಯಿಂದ ಓಡಿ ಹೋಗುತ್ತಿರುವುದು ಏಕೆ ಎನ್ನುವ ಪ್ರಶ್ನೆ ಸರ್ಕಾರವನ್ನು ಕಾಡುತ್ತಿದೆ.

ಹಲವೆಡೆ ಸಂಭವಿಸಿರುವ ಹಿಂಸಾಚಾರದಿಂದಾಗಿ ಸಾವಿರಾರು ಮಂದಿ ಕಾಬೂಲ್ನಲ್ಲಿ ಆಶ್ರಯ ಪಡೆದಿದ್ದಾರೆ.

ಈ ತಿಂಗಳ ಅಂತ್ಯಕ್ಕೆ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳುವುದಾಗಿ ಹೇಳಿರುವ ಅಮೆರಿಕ, ಕೆಲವೆಡೆ ವಾಯು ದಾಳಿ ಮಾತ್ರ ನಡೆಸಿದೆ. ಆದರೆ, ಇತರ ಕಾರ್ಯಾಚರಣೆಯಿಂದ ದೂರವೇ ಉಳಿದಿದೆ.

ಫರಾಹ್ನಲ್ಲಿ ತಾಲಿಬಾನಿಗಳು ಅಫ್ಗಾನಿಸ್ತಾನದ ಭದ್ರತಾ ಪಡೆಗಳ ಯೋಧರ ದೇಹವನ್ನು ಬೀದಿಯಲ್ಲಿ ಎಳೆದಾಡಿ ‘ದೇವರು ದೊಡ್ಡವನು’ ಎಂದು ಘೋಷಣೆ ಹಾಕಿದ್ದಾರೆ.

‘ಪರಿಸ್ಥಿತಿ ನಿಯಂತ್ರಣದಲ್ಲಿದೆ. ಫರಾಹ್ ನಗರದಲ್ಲಿ ನಮ್ಮ ಮುಜಾಹಿದ್ದೀನ್ಗಳು ಗಸ್ತು ತಿರುಗುತ್ತಿದ್ದಾರೆ’ ಎಂದು ತಾಲಿಬಾನ್ ಉಗ್ರನೊಬ್ಬ ತಿಳಿಸಿದ್ದಾನೆ.

ತಾಲಿಬಾನಿಗಳು ಈ ಮೊದಲು ಕುಂದುಜ್ ಸೇರಿದಂತೆ ಆರು ಪ್ರಾಂತ್ಯಗಳ ರಾಜಧಾನಿಗಳನ್ನು ವಶಪಡಿಸಿಕೊಂಡಿದ್ದರು.

ಬುಧವಾರ ಕುಂದುಜ್ ವಿಮಾನ ನಿಲ್ದಾಣದಲ್ಲಿನ ಅಫ್ಗನ್ ರಾಷ್ಟ್ರೀಯ ಸೇನೆಯ ಪ್ರಧಾನ ಕಚೇರಿಯನ್ನು ಸಹ ತಾಲಿಬಾನ್ ವಶಪಡಿಸಿಕೊಂಡಿದೆ. ಇದರಿಂದ ಸೇನೆಗೆ ತೀವ್ರ ಹಿನ್ನಡೆಯಾದಂತಾಗಿದೆ ಎಂದು ಕುಂದುಜ್ ಪ್ರಾಂತ್ಯದ ಸದಸ್ಯ ಘುಲಾಮ್ ರಬಾನಿ ತಿಳಿಸಿದ್ದಾರೆ.

ಅಫ್ಗಾನಿಸ್ತಾನದ 400 ಜಿಲ್ಲೆಗಳ ಪೈಕಿ 230 ಜಿಲ್ಲೆಗಳಲ್ಲಿ ತಾಲಿಬಾನ್ ನಿಯಂತ್ರಣ ಸಾಧಿಸಿದೆ ಎಂದು ಐರೋಪ್ಯ ಒಕ್ಕೂಟದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಯರಿಗೆ ನಿರ್ಬಂಧ:

ತಾಲಿಬಾನಿಗಳು ತಾವು ವಶಪಡಿಸಿಕೊಂಡಿರುವ ಸ್ಥಳಗಳಲ್ಲಿ ಮಹಿಳೆಯರಿಗೆ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ ಎಂದು ನಾಗರಿಕರು ತಿಳಿಸಿದ್ದಾರೆ.ಕೆಲವೆಡೆ ಶಾಲೆಗಳಿಗೂ ಬೆಂಕಿ ಹಚ್ಚಿದ್ದಾರೆ. ಜತೆಗೆ ಸೇಡಿಗಾಗಿ ಹಲವರನ್ನು ಹತ್ಯೆ ಮಾಡಿರುವ ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.