ನ್ಯೂಯಾರ್ಕ್: ಕೋವಿಡ್ ಲಸಿಕೆಗಳನ್ನು ರಫ್ತು ಮಾಡಲು ಭಾರತ ತೀರ್ಮಾನಿಸಿರುವುದು ಮಹತ್ವದ ಬೆಳವಣಿಗೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೊಂ ಗೆಬ್ರೇಯೇಸಸ್ ಹೇಳಿದ್ದಾರೆ.

‘ವರ್ಷಾಂತ್ಯದೊಳಗೆ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಜನಸಂಖ್ಯೆಯ ಶೇ 40ರಷ್ಟು ಜನರಿಗೆ ಲಸಿಕೆ ನೀಡಬೇಕು ಎಂಬ ಗುರಿ ಸಾಧನೆಗೆ ಭಾರತದ ಈ ನಿರ್ಧಾರ ನೆರವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಲಸಿಕೆ ಮೈತ್ರಿ’ ಕಾರ್ಯಕ್ರಮದಡಿ ಕೋವಿಡ್–19 ಲಸಿಕೆಗಳ ರಫ್ತಿಗೆಅಕ್ಟೋಬರ್ ವೇಳೆಗೆ ಚಾಲನೆ ನೀಡುವುದಾಗಿ ಭಾರತ ಸೋಮವಾರ ಘೋಷಿಸಿದೆ.

‘ಅಕ್ಟೋಬರ್‌ನಲ್ಲಿ ಕೋವಿಡ್ ಲಸಿಕೆಯ ರಫ್ತಿಗೆ ಚಾಲನೆ ನೀಡುವುದಾಗಿ ಘೋಷಿಸಿರುವುದಕ್ಕೆ ಆರೋಗ್ಯ ಸಚಿವರಿಗೆ ಧನ್ಯವಾದಗಳು’ ಎಂದು ಗೆಬ್ರೇಯೇಸಸ್ ಅವರು ಟ್ವೀಟ್ ಮಾಡಿದ್ದು, ಭಾರತದ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರಿಗೆ ಧನ್ಯವಾದ ಹೇಳಿದ್ದಾರೆ.

ಕೋವಿಡ್‌ನ ಎರಡನೇ ಅಲೆ ಏಪ್ರಿಲ್‌ನಲ್ಲಿ ಕಾಣಿಸಿಕೊಂಡಾಗ, ಭಾರತ ಕೋವಿಡ್ ಲಸಿಕೆಗಳ ರಫ್ತನ್ನು ಸ್ಥಗಿತಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.