ಮಾಂಟೆಸಿಟೊ(ಅಮೆರಿಕ): 'ರಾಜಮನೆತನದ ನನ್ನನ್ನು ರಕ್ಷಿಸುವುದಿಲ್ಲ ಎಂಬುದು ಪ್ರಿನ್ಸ್ ಹ್ಯಾರಿಯನ್ನು ವಿವಾಹವಾದ ನಂತರ ನನಗೆ ಸ್ಪಷ್ಟವಾಗಿ ಮನವರಿಕೆಯಾಗಿತ್ತು,' ಎಂದು ಮೇಘನ್ ಮಾರ್ಕೆಲ್ ಹೇಳಿದ್ದಾರೆ. ಅವರು ಅಮೆರಿಕದ 'ಟಾಕ್ ಶೋ' ನಿರೂಪಕಿ ಓಪ್ರಾ ವಿನ್‌ಫ್ರೇಗೆ ನೀಡಿರುವ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಅರಮನೆ ತೊರೆದ ಹ್ಯಾರಿ ದಂಪತಿ

'ನಾನು ಮಾತ್ರ ರಕ್ಷಣೆಗೆ ಒಳಪಟ್ಟಿರಲಿಲ್ಲ. ಆದರೆ, ಕುಟುಂಬದ ಇತರ ಸದಸ್ಯರನ್ನು ರಕ್ಷಿಸಿಕೊಳ್ಳಲು ಅವರು ಸುಳ್ಳು ಹೇಳಲು ಸಿದ್ಧರಿದ್ದರು. ನನ್ನನ್ನು ಮತ್ತು ನನ್ನ ಗಂಡನನ್ನು ರಕ್ಷಿಸಲು ಸತ್ಯವನ್ನು ಹೇಳಲು ಅವರು ಸಿದ್ಧರಿರಲಿಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಪೂರಕವಾಗಿ ನಿರ್ದಿಷ್ಟ ಸಂದರ್ಭವನ್ನೇನೂ ಅವರು ಉಲ್ಲೇಖಿಸಿಲ್ಲ.

ಇದನ್ನೂ ಓದಿ:PV Web Exclusive: ಬದುಕೇ ಸಾಕೆಂದೆನಿಸಿತ್ತು ಎಂದ ಮೇಘನ್ ಮಾರ್ಕೆಲ್

'ನನ್ನ ಮಗ ಆರ್ಚಿ ಗರ್ಭದಲ್ಲಿದ್ದಾಗ ರಾಜಮನೆತನ ಆತಂಕದಲ್ಲಿತ್ತು! ಮಗುವೇನಾದರೂ ಹುಟ್ಟಿದರೆ ಅದರ ಚರ್ಮ ಎಷ್ಟು ಗಾಢವಾಗಿರಬಹುದು ಎಂಬೆಲ್ಲ ಚರ್ಚೆಗಳು ಅಲ್ಲಿ ನಡೆಯುತ್ತಿದ್ದವು,' ಎಂದು ಮೇಘನ್ ಸಂದರ್ಶನದ ವೇಳೆ ಹೇಳಿದ್ದಾರೆ. ಇದನ್ನು ಕೇಳಿದ ನಿರೂಪಕಿ ಒಂದು ಕ್ಷಣ ದಿಗ್ಭ್ರಾಂತರಾದರು. ಅವಾಕ್ಕಾಗಿ ಕುಳಿತರು.

ಇದನ್ನೂ ಓದಿ:ಹ್ಯಾರಿ, ಮೇಘನ್ ದಂಪತಿ ವಿರುದ್ಧ ಮತ್ತೆ ಟೀಕೆ

ಮೇಘನ್‌ಗೆ ರಾಜಕುಮಾರ ಹ್ಯಾರಿ ಈ ವಿಷಯ ತಿಳಿಸಿದ್ದರು. ಆದರೆ, ಹ್ಯಾರಿಗೆ ಯಾರು ಈ ಮಾತು ಹೇಳಿದ್ದರು ಎಂಬುದನ್ನು ಮೇಘನ್ ಬಹಿರಂಗಪಡಿಸಲು ನಿರಾಕರಿಸಿದರು. ಅವರ ಹೆಸರು ಬಹಿರಂಗಪಡಿಸುವುದು 'ಬಹಳ ಹಾನಿಕರ' ಎಂದು ಮೇಘನ್ ಹೇಳಿಕೊಂಡಿದ್ದಾರೆ.

ಅಲ್ಲದೆ,ರಾಜಕುಮಾರನ ಸ್ಥಾನವನ್ನು ನೀಡಲಾಗುವುದಿಲ್ಲ, ರಕ್ಷಣೆಯೂ ಸಿಗುವುದಿಲ್ಲ ಎಂಬ ಹ್ಯಾರಿ ಮಾತು ಕೇಳಿ ದಿಗ್ಭ್ರಮೆಗೊಂಡೆ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಬಿಕ್ಕಟ್ಟು ವರದಿ ಅಲ್ಲಗಳೆದ ಬ್ರಿಟನ್ ರಾಜಕುಮಾರ

ವಿಚ್ಛೇದಿತಳು, ಅಮೆರಿಕನ್ ಮೂಲದ ನಟಿಯಾಗಿದ್ದೂ ರಾಜಮನೆತನ ಸೇರಿದ್ದರ ಬಗ್ಗೆ ನಾನು ಎಂದೂ ಯೋಚನೆ ಮಾಡಿರಲಿಲ್ಲ. ಆದರೆ, ಅವರು ಅದನ್ನೇ ಯೋಚನೆ ಮಾಡುತ್ತಿದ್ದರು. ನನ್ನನ್ನೂ ಚಿಂತೆಗೆ ದೂಡಿದರು. ರಾಜಮನೆತನವೊಂದೇ ನನ್ನೊಂದಿಗೆ ಹೀಗೆ ನಡೆದುಕೊಳ್ಳಲಿಲ್ಲ. ಅದರ ಹಿಂದಿನ ಜನರೂ ನನ್ನೊಂದಿಗೆ ಇದೇ ರೀತಿ ವರ್ತಿಸಿದರು ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದಿಷ್ಟೇ ಅಲ್ಲ, ಬ್ರಿಟಿಷ್ ರಾಣಿ ನನಗೆ ಯಾವತ್ತಿಗೂ ವಿಸ್ಮಯವಾಗಿಯೇ ಉಳಿದಿದ್ದಾರೆ. ನಾನು ರಾಜಕುಮಾರ ಹ್ಯಾರಿಯನ್ನು ಮದುವೆಯಾಗಿ ಹೋದ ನಂತರ ಅಲ್ಲಿ ನನಗೇನು ಕೆಲಸ ಎಂಬುದೇ ನನಗೆ ಅರಿವಾಗಲಿಲ್ಲ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಹ್ಯಾರಿ ದಂಪತಿ ಭವಿಷ್ಯ ನಿರ್ಧರಿಸಲು ಇಂದು ಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.